ಬಂಟ್ವಾಳ: ಕಸ್ಬಾಗ್ರಾಮದ ಮಹಿಳೆಗೆ ಕೊರೋನ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಅವರ ಕುಟುಂಬಿಕರು, ನೆರೆಮನೆಯವರು ಸೇರಿದಂತೆ 9 ಮಂದಿಯನ್ನು ಮಂಗಳವಾರ ಮಧ್ಯಾಹ್ನದ ವೇಳೆಗೆ ಎನ್ ಐಟಿಕೆ ಕ್ವಾರೆಂಟನ್ ನಲ್ಲಿ ಇರಿಸಲಾಗಿದೆ.
ಭಾನುವಾರ ಮೃತಪಟ್ಟ ಮಹಿಳೆಯ ಪಕ್ಕದ ನಿವಾಸಿ, ಸಂಬಂಧಿ ಮಹಿಳೆಗೆ ಕರೋನಾ ಸೋಂಕು ದೃಢಪಟ್ಟು ವರದಿ ಪ್ರಕಟಣವಾದ ಬೆನ್ನಲ್ಲೆ ಮಹಿಳೆಯ ಗಂಡ,ಮಗಳು, ಮೊಮ್ಮಗಳು, ಇವರ ಸಂಬಂಧಿ ಮಹಿಳೆ ಮತ್ತವರ ಮಗಳು ಹಾಗೆಯೇ ಇವರ ಪಕ್ಕದ ಮನೆಯ ಗಂಡ,ಹೆಂಡತಿ ಇವರ ಇಬ್ಬರು ಮಕ್ಕಳು ಸೇರಿ ಒಟ್ಟು 9 ಮಂದಿಯನ್ನು ಕ್ವಾರಂಟೈನ್ ಗೆ ಕೋವಿಡ್ 19 ಆ್ಯಂಟಿ ಸ್ಕ್ವಾಡ್ ಕರೆದೊಯ್ದಿದ್ದಾರೆ.