ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿನ ಮಹಿಳೆಗೆ ಕೊರೋನ ದೃಢಪಟ್ಟ ಹಿನ್ನೆಯಲ್ಲಿ ನಾಯಿಲ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದ್ದು ಸುತ್ತಲಿನ 100 ಮೀಟರ್ ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಘೋಷಿಸಲಾಗಿದೆ. ಅಲ್ಲದೆ ಮಹಿಳೆಯ ಕುಟುಂಬ, ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗುವ ಕೆಲಸ ನಡೆಯುತ್ತಿದೆ. ಮಹಿಳೆ ಪ್ರಯಾಣಿಸಿದ ರೂಟ್ ಮ್ಯಾಪನ್ನೂ ಪರಿಶೀಲಿಸಲಾಗುತ್ತದೆ.
ಬಂಟ್ವಾಳ, ಪಾಣೆಮಂಗಳೂರು ಪರಿಸರದಲ್ಲಿ ಆತಂಕ
ನರಿಕೊಂಬು ಗ್ರಾಪಂ ವ್ಯಾಪ್ತಿಯನ್ನು ಸೀಲ್ ಡೌನ್ ಗೊಳಪಡಿಸಿರುವುದರಿಂದ 24 ಗಂಟೆ ಕಾರ್ಯ ನಿರ್ವಹಿಸಲು 11 ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ. ನರಿಕೊಂಬು ಗ್ರಾಪಂ ನಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಈ ಭಾಗದ ಜನರಿಗೆ ಅಗತ್ಯವಸ್ತುಗಳನ್ನು ಕಂಟ್ರೋಲ್ ರೂಂನಿಂದ ಪೂರೈಸಲಾಗುತ್ತಿದೆ. ಭಾನುವಾರ ಮತ್ತೆ ಮಹಿಳೆಯೊಬ್ಬರಲ್ಲಿ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಬಂಟ್ವಾಳ, ಪಾಣೆಮಂಗಳೂರು ಪರಿಸರದಲ್ಲಿ ಜನರ ಆತಂಕ ಮತ್ತಷ್ಟು ಹೆಚ್ಚಾಗಿದೆ.