ಬಂಟ್ವಾಳ: ಸುರೇಂದ್ರ ಭಂಡಾರಿ ಹತ್ಯೆಯ ಬಳಿಕ ಬಂಟ್ವಾಳದಲ್ಲಿ ಒಂದಲ್ಲ ಒಂದು ಅಹಿತಕರ ಘಟನೆ ಸಂಭವಿಸುತ್ತಲೇ ಇದೆ. ಶನಿವಾರ ಮುಂಜಾನೆ ಮತ್ತೊಂದು ಘಟನೆ ಸಂಭವಿಸಿದೆ.
ಶುಕ್ರವಾರ ಮೆಲ್ಕಾರ್ನಲ್ಲಿ ನಡೆದ ಕೊಲೆ ಆರೋಪಿಯ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದರು. ಕೊಲೆ ಆರೋಪಿಗಳಾದ ಖಲೀಲ್, ಹಫೀಜ್ ಸೇರಿದಂತೆ ಮೂವರು ಆರೋಪಿಗಳು ಬೆಂಗಳೂರು ಕಡೆಗೆ ಹೋಗುತ್ತಿದ್ದ ಮಾಹಿತಿ ಪಡೆದ ಪೊಲೀಸರು ಬೆನ್ನಟ್ಟಿ ಹೋಗಿದ್ದರು. ಗುಂಡ್ಯ ತಲುಪಿದಂತೆ ಆರೋಪಿ ಖಲೀಲ್ ಪೋಲೀಸರು ಮೇಲೆ ತಲವಾರು ದಾಳಿ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಬಂಟ್ವಾಳ ನಗರ ಠಾಣಾ ಎಸ್.ಐ. ಅವಿನಾಶ್ ಗುಂಡಿನ ದಾಳಿ ನಡೆಸಿದ್ದಾರೆ.
ಆರೋಪಿಗಳ ತಲವಾರು ದಾಳಿಯಿಂದ ಎಸ್ ಐ ಪ್ರಸನ್ನ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಆರೋಪಿ ಖಲೀಲ್ ಕೂಡ ಗಾಯಗೊಂಡಿದ್ದು ಆತನನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಫೀಜ್ ಹಾಗೂ ಇನ್ನೊಬ್ಬ ಆರೋಪಿ ಓಡಿ ತಪ್ಪಿಸಿಕೊಂಡಿದ್ದಾರೆ.