Wednesday, August 10, 2022

Latest Posts

ಬಂಟ್ವಾಳ| ಬೈಕ್-ಲಾರಿ ಡಿಕ್ಕಿ: ಸವಾರ ಗಂಭೀರ ಗಾಯ!

ಬಂಟ್ವಾಳ: ಬಿ.ಸಿ.ರೋಡಿನ ವೃತ್ತ ಬಳಿ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.
ಬೈಕ್ ಸವಾರ ಗಂಭೀರ ಸ್ವರೂಪದ ಗಾಯಗೊಂಡಿದ್ದಾನೆ.ಬಿ.ಸಿ.ರೋಡ್ ಕಾಮಾಜೆಯ ರಿತೇಶ್ ಗಾಯಗೊಂಡವರಾಗಿದ್ದು,ಇವರನ್ನು ಸ್ಥಳಿಯರು ತಕ್ಷಣ ಆಸ್ಪತ್ರೆ ದಾಖಲಿಸಿದ್ದಾರೆ.ಬಿ.ಸಿ.ರೋಡಿನಲ್ಲಿರುವ ಕೇಬಲ್ ಸಂಸ್ತೆಯೊಂದರಲ್ಲಿ ಕೆಲಸ ಮಾಡುತ್ತಿರುವ ರಿತೇಶ್ ಕೆಲಸ ಮುಗಿಸಿ ಮನೆಗೆ ತೆರಳುತ್ತಿರು ಸಂದರ್ಭ ಈ ಘಟನೆ ನಡೆದಿದೆ.
ಬಂಟ್ವಾಳ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss