Monday, August 15, 2022

Latest Posts

ಬಂಡೀಪುರದಲ್ಲಿ ರಾತ್ರಿ ಸಫಾರಿ ಪ್ರಕರಣ: ನಟ ಧನ್ವೀರ್ ಗೌಡ ಸಹಿತ ಐವರ ವಿರುದ್ದ ಎಫ್‌ಐಆರ್

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಫಾರಿ ನಡೆಸಿರುವ ಆರೋಪಕ್ಕೆ ಸಂಬಂಧಪಟ್ಟಂತೆ ನಟ ಧನ್ವೀರ್ ಗೌಡ ಸೇರಿದಂತೆ ಐವರ ವಿರುದ್ದ ಅರಣ್ಯ ಇಲಾಖೆ ಅಧಿಕಾರಿಗಳು ಎಫ್‌ಐಆರ್ ದಾಖಲು ಮಾಡಿದ್ದಾರೆ.
ಪ್ರಕರಣದಲ್ಲಿ ನಟ ಧನ್ವೀರ್ A1 ಆರೋಪಿಯಾಗಿದ್ದು, ಸಫಾರಿ ವೇಳೆ ಜೊತೆಯಲ್ಲಿದ್ದ, ವಿಶ್ವಾಸ್‌ ಐಯ್ಯರ್‌ ಮತ್ತು ದರ್ಶನ್‌ ಬಿನ್‌ ನಂದಕುಮಾರ್ ಹಾಗೂ ಇನ್ನೂ ಹೆಸರು ಪತ್ತೆಯಾಗದ ಇನ್ನೂ ಮೂವರ ಆರೋಪಿಗಳ ಮೇಲೆ ಪ್ರಕರಣ ಸಂಬಂಧ ಕೇಸ್​ ದಾಖಲಿಸಲಾಗಿದೆ. ಧನ್ವೀರ್​ಗೆ ಸಹಕಾರ ನೀಡಿದ ಆರೋಪದ ಅಡಿಯಲ್ಲಿ ಮಾವುತ, ಕಾವಾಡಿ ಹಾಗೂ ಉಸ್ತುವಾರಿ ಸಿಬ್ಬಂದಿಗೆ ಶೋಕಾಸ್​ ನೋಟಿಸ್‌ ಜಾರಿಯಾಗಿದೆ ಎಂದು ನಾಗರಹೊಳೆ ಸಿಫ್‌ ಮಹೇಶ್‌ ಕುಮಾರ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss