ಬೆಂಗಳೂರು: ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದ ಅಭಿವೃದ್ಧಿ ಗೆ ಪೂರಗವಾಗುವಂತಹ ಬಜೆಟ್ ಮಂಡಿಸಲು ತೀರ್ಮಾಸಿದ್ದು, 2020- 2021 ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ.
- ಬಿತ್ತನೆ ಬೀಜ, ರಸಗೊಬ್ಬರ ಸಂಬಂಧಿಸಿದಂತೆ ಹೊಸ ನೀತಿ ಜಾರಿಯಾಗಲಿದೆ.
- ಕರಾವಳಿಯ ನದಿಗಳಿಗೆ ಕಿಂಡಿ ಅಣೆಕಟ್ಟು ಅಳವಡಿಸಲು ಮಾಸ್ಟರ್ ಪ್ಲಾನ್ ಮಾಡಲಾಗಿದೆ. ಮತ್ಸ ವಿಕಾಸ ಯೋಜನೆ, ಸಮಗ್ರ ವರಾಹ ಯೋಜನೆ ಜಾರಿಯಾಗಲಿದೆ.
- ಎತ್ತಿನ ಹೊಳೆ ಯೋಜನೆಗೆ ಆದ್ಯತೆ ನೀಡಲಾಗಿದ್ದು, ಮುಂದಿನ ಮುಂಗಾರಿನಲ್ಲಿ ಚಾಲನೆಗೆ ಬರಲಾಗುವುದು. ಈ ಯೋಜನೆಗೆ 1,500 ಕೊಟಿ ನೆರವು ಮೀಸಲಿಡಲಾಗಿದೆ.
- ವಿಶ್ವಕರ್ಮ ಅಭಿವೃದ್ಧಿಗೆ 25 ಕೋಟಿ ರೂ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ. ನೀಡಲಾಗಿದೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ಮತ್ತು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಜವುಳಿ ಪಾರ್ಕ್ ನಿರ್ಮಾಣ ಮಾಡಲಾಗುವುದು. - ಡೀಸೆಲ್ ಲೀಟರ್ ಗೆ ರೂ.1.59 ಏರಿಕೆಯಾಗಲಿದ್ದು, ಡೀಸಲ್ಮೇಲಿನ ತೆರಿಗೆ ಶೇ.21 ರಿಂದ ಶೇ.24 ಕ್ಕೆ ಏರಿಕೆ.
- ರಾಜ್ಯದಲ್ಲಿ ಇಂದಿನಿಂದ ಪ್ರತಿ ಲೀಟರ್ ಪೆಟ್ರೋಲ್ ಗೆ 1.60ರೂ ಹೆಚ್ಚಳ, ಪೆಟ್ರೋಲ್ ಮೇಲಿನ ತೆರಿಗೆ ಹೆಚ್ಚಳ. 32%ರಿಂದ 35% ವರೆಗೆ ಹೆಚ್ಚಳ.
- ಸರ್ಕಾರಿ ಕಚೇರಿಗಳಿಗೆ ಪ್ರತ್ಯೇಕ ಕಟ್ಟಡ ನಿರಮಾಣ. ಆನಂದ್ ರಾವ್ ಸರ್ಕಲ್ ನಲ್ಲಿ 25 ಮಹಡಿಗಳ ಕಟ್ಟಡ ನಿರ್ಮಾಣ ಮಾಡಲಾಗುವುದು. ಇದಕ್ಕೆ 400 ಕೋಟಿ ರೂ. ಮೀಸಲಿಡಲಾಗುವುದು.
- ಬೆಂಗಳೂರಿನ ಸಿಲ್ಕ್ ಬೋರ್ಡ್ ನಿಂದ ಏರ್ ಪೋರ್ಟ್ ವರೆಗೆ ಔಟರ್ ರಿಂಗ್ ರೋಡ್ ನಿರ್ಮಾಣವಾಗಲಿದೆ.