Friday, July 1, 2022

Latest Posts

ಬಜೆಟ್ ನಲ್ಲಿ ಮಹಿಳೆಯರ ಅಭ್ಯುದಯಕ್ಕೆ ಆದ್ಯತೆ; 28,600 ಕೋಟಿ ರೂ. ಮೀಸಲು

ಹೊಸದಿಲ್ಲಿ: ಗರ್ಭಿಣಿಯರ ಸಾವನ್ನು ತಡೆಗಟ್ಟುವುದು ಸೇರಿದಂತೆ ಮಹಿಳೆಯರ ಅಭಿವೃದ್ಧಿಗಾಗಿ ಕೇಂದ್ರ ಬಜೆಟ್ ನಲ್ಲಿ 28,600 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.

ಗರ್ಭಿಣಿಯರ ಸಾವನ್ನು ತಡೆಗಟ್ಟುವ ನಿಟ್ಟಿನಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗುವುದು. ಅಲ್ಲದೆ ಅಂಗನವಾಡಿಗಳ ಮೂಲಕ ಅವರಿಗೆ ಪೌಷ್ಟಿಕ ಆಹಾರ ವಿತರಣೆಗೂ ಬಜೆಟ್ ಆದ್ಯತೆ ನೀಡಲಾಗಿದೆ.

ಬೇಟಿ ಬಚಾವೋ ಯೋಜನೆ ಜಾರಿಯಿಂದಾಗಿ ಶಿಕ್ಷಣ ಪಡೆಯಲು ಮುಂದಾದ ಹೆಣ್ಣು ಮಕ್ಕಳ ಪ್ರಮಾಣ ಹೆಚ್ಚಾಗಿದೆ. ಶಾಲೆಗಳಲ್ಲಿ ಹುಡುಗರಿಗಿಂತ ಹುಡುಗಿಯರ ನೋಂದಣಿ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಉನ್ನತ ವ್ಯಾಸಂಗದತ್ತ ಗಮನ ಹರಿಸುವ ಹೆಚ್ಚಿನ ಹೆಣ್ಣು ಮಕ್ಕಳು ಗಮನ ಹರಿಸುತ್ತಿದ್ದಾರೆ ಎಂದು ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಪೌಷ್ಟಿಕ ಆಹಾರ ವಿತರಣೆಗಾಗಿ 6 ಲಕ್ಷ ಅಂಗನವಾಡಿಗಳಿಗೆ 35,300 ಕೋಟಿ ರೂ. ಮೀಸಲಿರಿಸಲಾಗಿದೆ. ಎಸ್ ಸಿ- ಎಸ್ ಟಿ ಕಲ್ಯಾಣಕ್ಕಾಗಿ 85 ಸಾವಿರ ಕೋಟಿ ರೂ. ಅನುದಾನ ಬಜೆಟ್ ನಲ್ಲಿ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss