Monday, July 4, 2022

Latest Posts

ಬಜೆಟ್ ಮಂಡನೆ ಆರಂಭ!

ಹೊಸದಿಲ್ಲಿ: ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಪ್ರಾರಂಭ ಮಾಡಿದ್ದಾರೆ.ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದೀಗ ಲೋಕಸಭೆಯಲ್ಲಿ ಸ್ಪೀಕರ್ ಅನುಮತಿ ಪಡೆದು ಬಜೆಟ್ ಮಂಡಿಸಲು ಆರಂಭಿಸಿದ್ದಾರೆ.

2019-2020 ರಲ್ಲಿ ದೇಶದಲ್ಲಿ ಆರ್ಥಿಕ ಬದಲಾವಣೆ ಅಭಿವೃದ್ಧಿಯಾಗಿದೆ. ಬ್ಯಾಂಕಿನ ವ್ಯವಹಾರಕ್ಕೆ ಕೇಂದ್ರ ಸರ್ಕಾರ ಅಗತ್ಯ ಹಣ ಹೊಂದಿಸುವಲ್ಲಿ ಫಲಕಾರಿಯಾಗಿದೆ. ಈ ಬೆಳವಣಿಗೆಗಳಿಗೆ ಅರುಣ್ ಜೇಟ್ಲಿ ಕಾರಣ ಎಂದು ನಿರ್ಮಲಾ ಸೀತಾರಮನ್ ಹೇಳಿದರು.

ರಾಜಕೀಯ ಕಿತ್ತಾಟಗಳಿದ್ದರೂ ಜಿಎಸ್ ಟಿ ದೇಶದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಎಸ್ ಟಿ ಮಂಡಳಿ ತೆರಿಗೆ ಪ್ರಕ್ರಿಯೆಯಲ್ಲಿ ಶ್ರಮಿಸುತ್ತಿದ್ದಾರೆ ಇದರಿಂದ  ದೇಶ ಬೆಳವಣಿಗೆ ಕಾಣುತ್ತಿದೆ. ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕ ದೇಶವಾಗಿದೆ. ಭಾರತ ಕಳೆದ 5 ವರ್ಷಗಳಲ್ಲಿ ಭಾರತೀಯರನ್ನು ಉದ್ಯಮಶೀಲರನ್ನಾಗಿ ಮಾಡಿದೆ. 2014ರಲ್ಲಿ ಭಾರತದ ಸಾಲ ಶೇ.52 ರಷ್ಟು ದಾಖಲಾಗಿತ್ತು, ಆದರೆ ಕೇಂದ್ರ ಸರ್ಕಾರ ಸಾಲವನ್ನು ಶೇ. 47.8 ರಷ್ಟು ಕಡಿಮೆ ಮಾಡಿದೆ.

ಈ ಬಾರಿ ಭಾರತದ ಬಜೆಟ್ ನಲ್ಲಿ ಮುಖ್ಯವಾಗಿ 3 ಅಂಶಗಳ ಕುರಿತಾಗಿದೆ.

  • ಆಕಾಂಕ್ಷೀಯ ಭಾರತ
  • ಆರ್ಥಿಕ ಬೆಳವಣಿಗೆ
  • ಸಾಮಾಜಿಕ ಕಾಳಜಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss