Friday, July 1, 2022

Latest Posts

ಬಟ್ಟೆಗೆ ರಾಸಾಯನಿಕ ಬಣ್ಣ ಹಾಕುತ್ತಿದ್ದ ಕಾರ್ಖಾನೆ ಮೇಲೆ ಅಧಿಕಾರಿಗಳ ದಾಳಿ: ಒಬ್ಬನ ಬಂಧನ

ಹೊಸ ದಿಗಂತ ವರದಿ, ಮೈಸೂರು:

ಅಕ್ರಮವಾಗಿ ಬಟ್ಟೆಗೆ ರಾಸಾಯನಿಕ ಬಣ್ಣ ಹಾಕುವ ಕಾರ್ಖಾನೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಕಾರ್ಖಾನೆಯ ಮೇಲ್ವಿಚಾರಕರಾಗಿದ್ದ ಸಿಂಗಪಾoಡ್ಯನ್ ಬಂಧಿತ ಆರೋಪ ನಗರದ ಬೋಗಾದಿ ವರ್ತುಲ ರಸ್ತೆ ಬಳಿ ನಿಷೇಧಿತ ರಾಸಾಯನಿಕ ಬಳಿಸಿದ ಬಣ್ಣವನ್ನು ಬಟ್ಟೆಗಳಿಗೆ ಉಪಯೋಗಿಸಿ ಅದರ ನೀರನ್ನು ನಗರಪಾಲಿಕೆ ವ್ಯಾಪ್ತಿಯ ಒಳಚರಂಡಿಗೆ ಬಿಡಲಾಗುತಿತ್ತು.
ತೋಟದ ಜಾಗ ವಿಚಾರವಾಗಿ ಖಾಸಗಿ ವ್ಯಕ್ತಿ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಡುವೆ ವ್ಯಾಜ್ಯ ಇದೆ. ಅದು ಪಾಲಿಕೆಗೆ ಸೇರಿದ ಜಾಗ ಎನ್ನಲಾಗುತ್ತಿದ್ದು, ಅಲ್ಲಿ ಸುರೇಶ್, ಮೂರ್ತಿ ಎಂಬವರು ಶೆಡ್ ಹಾಕಿಕೊಂಡಿದ್ದಾರೆ. ತಮಿಳುನಾಡಿನಿಂದ ಬಟ್ಟೆ ತರಿಸಿಕೊಂಡು ಅದಕ್ಕೆ ನಿಷೇಧಿತ ರಾಸಾಯನಿಕಭರಿತ ಬಣ್ಣದ ನೀರನ್ನು ಬಳಸಿ, ಅದನ್ನು ಪಾಲಿಕೆ ವ್ಯಾಪ್ತಿಗೆ ಸೇರಿದ ಒಳಚರಂಡಿ ಬಿಡಲಾಗುತ್ತಿದೆ.
ಈ ಸಂಬoಧ ಮಾಹಿತಿ ಪಡೆದು ಪೊಲೀಸರು, ಪಾಲಿಕೆ ಅಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ತೋಟದ ಮೇಲೆ ದಾಳಿ ನಡೆಸಿ, ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ. ಇಲ್ಲಿ ಮೇಲ್ವಿಚಾರಕರಾಗಿದ್ದ ಸಿಂಗಪಾoಡ್ಯನ್ ಎಂಬವನನ್ನು ವಶಕ್ಕೆ ಪಡೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss