Wednesday, August 10, 2022

Latest Posts

ಕೊಟ್ಟ ಭರವಸೆಯನ್ನು ಈಡೇರಿಸಿದ ನಟ ಸೋನುಸೂದ್: ಆಹಾರ ಸಾಮಗ್ರಿಗಳನ್ನು ಕಳುಹಿಸಿದ ರಿಯಲ್ ಹೀರೋ!

ಯಾದಗಿರಿ : ಐದು ದಿನಗಳ ಹಿಂದೆ ನಗರದ ಜಿಲ್ಲಾಸ್ಪತ್ರೆಯಲ್ಲಿ ರಾಮಸಮುದ್ರ ಗ್ರಾಮದ ಪದ್ಮಾ ನಾಗರಾಜ ಬೈಲ್‌ಪತ್ತರ ಎಂಬ ಮಹಿಳೆ ತ್ರೀವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಳು ಅವರ ಕುಟುಂಬ ಸಂಕಷ್ಟದಲ್ಲಿತ್ತು, ವಿಷಯ ತಿಳಿದ ಬಾಲಿವುಡ್ ಬಹುಭಾಷಾ ನಟ ಸೋನು ಸೂದ್ ಅವರೊಂದಿಗೆ ಮಾತನಾಡಿ ಭರವಸೆ ನೀಡಿದಂತೆ ಎರಡು ತಿಂಗಳಿಗಾಗುವಷ್ಟು ಆಹಾರ ಪದಾರ್ಥಗಳನ್ನು ಗುರುವಾರ ಬೆಳಿಗ್ಗೆ ಅಮೇಜಾನ್ ಪಾರ್ಸಲ್ ಮೂಲಕ ಕಳುಹಿಸಿದ್ದಾರೆ.
ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ನಾಗರಾಜ ಬೆಂಗಳೂರಿನಲ್ಲಿ ತನ್ನ ಪತ್ನಿಯೊಂದಿಗೆ ಕೆಲಸ ಮಾಡುತ್ತಿದ್ದ, ಆದರೆ ಮಾರ್ಚ್ ತಿಂಗಳಲ್ಲಿ ಕೋರೊನಾ ವೈರಸ್ ಹೆಚ್ಚಾಗಿ ಹರಡಿರುವುದರಿಂದ ಲಾಕ್‌ಡೌನ್ ಘೋಷಿಸಲಾಗಿತ್ತು, ಇದರಿಂದ ಕೆಲಸವಿಲ್ಲದೆ ನಾಗರಾಜ ಮರಳಿ ರಾಮಸಮುದ್ರ ಗ್ರಾಮಕ್ಕೆ ಮರಳಿದ, ತನ್ನ ಪತ್ನಿ ಪದ್ಮಾಗೆ ಆರ್ಥಿಕ ತೊಂದರೆಯ ಮದ್ಯೆ ಚಿಕಿತ್ಸೆ ಕೊಡಿಸಿದ .
ಅಗಸ್ಟ : 22ರಂದು ಶನಿವಾರ ಜಿಲ್ಲಾಸ್ಪತ್ರೆಯಲ್ಲಿ ವೈಧ್ಯರು ಪದ್ಮಾಗೆ ಸಿಜೇರಿಯನ್ ಮಾಡುವ ಮೂಲಕ 3 ಗಂಡು ಮಕ್ಕಳ ಹೆರಿಗೆ ಮಾಡಿಸಿದರು. ಆತ ಆರ್ಥಿಕ ಸಮಸ್ಯೆ ತಿಳಿದ ಕೆಲವು ವ್ಯಕ್ತಿಗಳು ಹಣಕಾಸಿನ ನೆರವು ನೀಡಿದರು.
ಬಡ ಕಾರ್ಮಿಕ ನಾಗರಾಜನ ಕುಟುಂಬದ ಸಮಸ್ಯೆ ದೂರದ ಮುಂಬೈಯಲ್ಲಿದ್ದ ನಟ ಸೋನುಸೂದ್ ತಿಳಿದು ನಾಗರಾಜನೊಂದಿಗೆ ಮಾತನಾಡಿ ಮೊದಲು ಆಹಾರ ಪದಾರ್ಥಗಳನ್ನು ಕಳುಹಿಸುವುವ ಮೂಲಕ ಮಾನವಿಯತೆ ಮೆರೆದು ಕನ್ನಡಿಗರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ.
ಬರುವ ದಿನಗಳಲ್ಲಿ ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ಹಾಗೂ ಅಗತ್ಯವೆನಿಸಿದರೆ ಉನ್ನತ ವೈದ್ಯಕೀಯ ಚಿಕೀತ್ಸೆಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಆಹಾರ ಸಾಮಗ್ರಿಗಳನ್ನು ಸ್ವಿಕರಿಸಿ ನಾಗರಾಜ ರಾಮಸಮುದ್ರ ನಟ ಸೋನುಸೂದ್ ಅವರು ಮಾತನಾಡಿ ಎರಡು ದಿನಗಳಲ್ಲಿ ನಮ್ಮ ಕುಟುಂಬಕ್ಕೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಕಳುಹಿಸಿದ್ದಾರೆ, ಅವರ ಮುಖ ನಾನು ನೋಡಿಲ್ಲ ಯಾವ ರೀತಿ ಕೃತಜ್ಞತೆ ಸಲ್ಲಿಸಬೇಕು ಎಂಬುದು ಅರ್ಥವಾಗುತ್ತಿಲ್ಲ ಭಾವುಕನಾದ.
ಗುರುವಾರ ಇಲ್ಲಿನ ಮಾದ್ಯಮದವರೊಂದಿಗೆ ವಿಡೀಯೋ ಕ್ಲಿಪ್ ಸಂದೇಶ ಕಳುಹಿಸಿ ಅಭಿಪ್ರಾಯ ಹಂಚಿಕೊAಡಿರುವ ನಟ ಸೋನುಸೂದ್ ನಾನು ನಾಗರಾಜನ ಕುಟುಂಬಕ್ಕೆ ಸಣ್ಣ ಸಹಾಯ ಮಾಡಿದ್ದೇನೆ, ಸಮಾಜದಲ್ಲಿರುವ ಸಂಪನ್ಮೂಲ ವ್ಯಕ್ತಿಗಳು ಇಂತಹ ಕುಟುಂಬಗಳಿಗೆ ಸಹಾಯ ಮಾಡಬೇಕು ಆ ಭಗವಂತನ ದಯೆಯಿಂದ ತಾಯಿ ಮಕ್ಕಳು ಆ ಕುಟುಂಬ ಆರೊಗ್ಯದಿಂದ ಇರಲಿ ಎಂದು ಹಾರೈಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss