Wednesday, August 10, 2022

Latest Posts

ಬಡ ಕುಟುಂಬಕ್ಕೆ ನೆರವಿಗೆ ನಿಂತ ಬಾಲಿವುಡ್ ನಟ ಸೋನು ಸೂದ್

ಯಾದಗಿರಿ : ಕಳೆದ ೩ ದಿನಗಳ ಹಿಂದೆ ನಗರದ ಸರ್ಕಾರಿ ಸಾರ್ವಜನಿಕ ಜಿಲ್ಲಾಸ್ಪತ್ರೆಯಲ್ಲಿ ೩ ಗಂಡು ಮಕ್ಕಳಿಗೆ ಜನ್ಮ ನೀಡಿದ ಗರ್ಭಿಣಿ ಮಹಿಳೆಯ ಕುಟುಂಬ ತೀವ್ರ ಸಂಕಷ್ಟದಲ್ಲಿದೆ.
ಕಡು ಬಡತಮ ಎದರಿಸುತ್ತಿರುವ ಜಿಲ್ಲೆಯ ರಾಮಸಮುದ್ರ ಗ್ರಾಮದ ಈ ಕುಟುಂಬ ತಮ್ಮ ಜೀವನ ಸಾಗಿರುವುದೆ ಕಷ್ಟಕರವಾಗಿದೆ. ಅಂತಹ ಸಂದರ್ಭದಲ್ಲಿ ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆ ಮಕ್ಕಳಿಗೆ ಹಾಲು ಕುಡಿಸಲು ಆಗುತ್ತಿಲ್ಲ. ಹೀಗಾಗಿ ಸಹಾಯ ಹಸ್ತ ಚಾಚಿತು ಆ ಕುಟುಂಬ. ಈ ವಿಷಯ ತಿಳಿದ ಬಾಲಿವುಡ್ ಸ್ಟಾರ್ ಸೋನು ಸೂದ್ ನೆರವು ನೀಡುವ ಭರವಸೆಯನ್ನು ಆ ಕುಟುಂಬಕ್ಕೆ ದೂರವಾಣಿಯ ಮೂಲಕ ನೀಡಿ ದೈರ್ಯ ಕಳೆದುಕೊಳ್ಳದಂತೆ ತಿಳಿಸಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿರುತ್ತಿರುವ ರಾಮಸಮುದ್ರ ಗ್ರಾಮದ ನಾಗರಾಜ್ ಬೈಲ್ ಪತ್ತರ ಹೆಂಡತಿಗೆ ಚಿಕಿತ್ಸೆ ಕೊಡಿಸಲು ಪರದಾಡುತ್ತಿದ್ದ. ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸಿಜರಿನ್ ಮೂಲಕ ಮಹಿಳೆಯ ಹೆರಿಗೆ ಮಾಡಿದರು. ತಾಯಿ ಮಕ್ಕಳು ಆರೋಗ್ಯದಿದ ಇದ್ದಾರೆ.
ನಾಗರಾಜ ಕುಟುಂಬ ಎದುರಿಸುತ್ತಿರುವ ಸಮಸ್ಯೆಯನ್ನು ಸ್ಥಳೀಯ ಪತ್ರಕರ್ತರೊಬ್ಬರು ನಟ ಸೋನು ಸೂದ್ ಗಮನಕ್ಕೆ ತಂದಾಗ ಅವರ ತಂಡದ ಮುಖ್ಯಸ್ಥ ಗೋವಿಂದ ಅಗ್ರವಾಲ ನಾಗರಾಜನ ಜತೆ ೩ ಬಾರಿ ಮಾತನಾಡಿ ಯಾವುದೇ ಕಾರಣಕ್ಕೂ ಆತಂಕ ಪಡಬೇಡಿ ಮೊದಲು ನಾವು ನಿಮಗೆ ೨ ತಿಂಗಳಿಗೆ ಆಗುವಷ್ಟು ಆಹಾರ ಪದಾರ್ಥಗಳನ್ನು ನೀಡುವ ಜೋತೆಗೆ ಅವರ ಮಕ್ಕಳ ಆರೋಗ್ಯ ಚಿಕಿತ್ಸೆಗೆ ತಗಲುವ ವೆಚ್ಚದ ಆರ್ಥಿಕ ಸಹಾಯ ನೀಡುವುದಾಗಿ ತಿಳಿಸಿದರು. ಇದರಿಂದ ಬಡ ಕುಟುಂಬದಲ್ಲಿ ಕೊಂಚ ನೆಮ್ಮದಿ ಮೂಡಿದಂತಾಗಿದೆ.
ಈಗಾಗಲೇ ನಟ ಸೋನು ಸೂದ್ ಮುಂಬಯಿ ನಗರದಲ್ಲಿ ಕೊರೋನಾ ವೈರಸ್ ಹೆಚ್ಚಾಗಿ ಹರಡಿದ ಸಂದರ್ಭದಲ್ಲಿ ನಗರದಲ್ಲಿ ಕೆಲಸ ಮಾಡುತ್ತಿರುವ ದೇಶದ ವಿವಿದ ರಾಜ್ಯಗಳ ವಲಸೆ ಕಾರ್ಮಿಕರನ್ನು ಸ್ವಂತ ಖರ್ಚಿನಲ್ಲಿ ಅವರ ಅವರ ಗ್ರಾಮಗಳಿಗೆ ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಪ್ರಸಕ್ತ ಸಮಸಮ್ಯೆ ಎದರಿಸುತ್ತಿರುವ ಕುಟುಂಬಕ್ಕೆ ಸಂಘ ಸಂಸ್ಥೆಗಳ ಸಹಾಯ ಹಸ್ತದ ಅವಶ್ಯಕತೆ ಇದೆ. ಅದಕ್ಕಾಗಿ ಅಂತಹ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಮುಂದೆ ಬಂದು ಅವರ ಬದುಕಿಗೆ ಆಸರೆಯಾಗಬೇಕು ಎಂಬುದು ಪತ್ರಿಕ್ರಿಯ ಆಶಯವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss