ಬಡ ನೇಕಾರರಿಗೆ ಜಗ್ಗೇಶ್ ಸಹಾಯ ಹಸ್ತ

0
31

ನವರಸ ಜಗ್ಗೇಶ್  ಅಂದರೆ ಸಾಕು ಎಲ್ಲರಿಗೂ ನೆನಪಾಗೋದು ಹಾಸ್ಯ ಪ್ರಧಾನ  ಪಾತ್ರದಲ್ಲಿ ನಿಪುಣರು ಎಂದು.  ಅವರು ಇಂದಿಗೂ ಸಿನಿಮಾ  ರಸಿಕರನ್ನ  ರಂಜಿಸುತ್ತಲೇ ಇರುತ್ತಾರೆ. ನಗೆ ಚಟಾಕಿ ಹಾರಿಸುದರಲ್ಲಿ ಜಗ್ಗೇಶ್  ಅವರು  ಎತ್ತಿದ  ಕೈ. ಅಷ್ಟೇ  ಅಲ್ಲದೆ ಸಿನಿಮಾ  ಅಭಿನಯ ಮಾತ್ರವಲ್ಲದೆ  ತಮ್ಮ ನೇರ ನುಡಿಯಿಂದಲೂ  ಜನರ  ಮನಸ್ಸು ಗೆದ್ದವರು. ಯಾರಾದರೂ ಕಷ್ಟದಲ್ಲಿದ್ದಾರೆ ಎಂದರೆ ಸಾಕು ಕೈಲಾದಷ್ಟು ಸಹಾಯ ಮಾಡುವ  ಹೆಂಗರಳು ಅವರದ್ದು, ಮೊದಲಿಂದಲೂ  ಸಮಾಜ  ಕಾರ್ಯ  ಮಾಡುವಲ್ಲಿ  ಅವರು ತಮ್ಮದೇಯಾದ ಛಾಪು ಮೂಡಿಸಿಕೊಂಡು ಬರುತ್ತಿದ್ದಾರೆ. ಇನ್ನು  ಜಗ್ಗೇಶ್ ಅವರು  ಯಾವಾಗೂ ಕೂಡ ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುತ್ತ  ಬಂದಿದ್ದಾರೆ. ಈಗಾಗಲೇ ಸಾಕಷ್ಟು  ಉದಾಹರಣೆಗಳು  ಇದ್ದವೇ . ಇತ್ತೀಚೆಗೆಷ್ಟೇ ಸಹ  ಕಲಾವಿದ ಕಿಲ್ಲರ್ ವೆಂಕಟೇಶ್ ಅವರ ಚಿಕಿತ್ಸೆಗೆ  ಸಹಾಯ ಮಾಡುವುದರ  ಜೊತೆಗೆ  ಬೇರೆವರಿಗೂ ಹಣ ನೀಡುವಂತೆ  ಮನವಿ  ಮಾಡಿದ್ದರು. ಅದೇ ರೀತಿ  ಖಾಸಗಿ ವಾಹಿನಿಯಲ್ಲಿ  ಪ್ರಸಾರ ವಾಗುತಿದ್ದ  ಸ ರಿ ಗ ಮ ಪ  ಶೋನಲ್ಲಿ ತುಮಕೂರಿನ   ಇಬ್ಬರು ಅಂಧ  ಗಾಯಕಿಯರು  ಭಾಗವಹಿಸಿದ್ದರು. ತಮ್ಮ ಮಧುರ ಕಂಠದಿಂದ  ಹರಿಸಿದ ಗಾನಸುಧೆಯಿಂದ ಕೇಳುಗರನ್ನ ಮೋಡಿ ಮಾಡಿದ್ದರು. ಈ ಕಾರ್ಯಕ್ರಮದ ವೇಳೆ  ಇಬ್ಬರು   ಸಹೋದರಿಯರು ತಮ್ಮ   ಆರ್ಥಿಕ  ಪರಿಸ್ಥಿತಿಯನ್ನ ಹೇಳಿಕೊಂಡಿದ್ದರು. ಇದನ್ನ  ಕೇಳಿ   ಜಗ್ಗೇಶ್  ಭಾವುಕರಾಗಿ ಅವರಿಬ್ಬರಿಗೆ  ಮನೆ  ಮಾಡಿಕೊಟ್ಟಿದ್ದರು. ಇನ್ನು ಹಲವಾರು ಸಮಾಜಮುಖಿ  ಕಾರ್ಯವನ್ನ  ಮಾಡುತ್ತಲೇ ಬರುತ್ತಿದ್ದಾರೆ ಜಗ್ಗೇಶ್ . ಅದರಲ್ಲಿ ಈಗ ಅಂಥದೇ  ಒಂದು ಹೊಸ  ಕಾರ್ಯವನ್ನು ಮಾಡಿದ್ದಾರೆ. ಅದು ಏನಪ್ಪಾ ಅಂದರೆ, ಕೊರೋನಾದಿಂದ  ಇಡಿ ದೇಶವೇ ತತ್ತರಿಸಿ ಹೋಗಿದೆ. ಇದ್ದರಿಂದ  ಹಲವಾರು  ವರ್ಗಗಳು  ಆರ್ಥಿಕ  ಸಂಕಷ್ಟದಲ್ಲಿ ಸಿಲುಕಿಕೊಂಡಿವೆ. ಇಂಥವರಿಗೆ  ಸಹಾಯ ಮಾಡಲು  ಜಗ್ಗೇಶ್ ಅವರು  ಮುಂದಾಗಿದ್ದಾರೆ. ಅವರೀಗ ಬೆಳಗಾವಿ ಮೂಲದ ನೇಕಾರರ ಕುಟುಂಬಕ್ಕೆ  ಸಹಾಯ ಹಸ್ತ  ನೀಡಿದ್ದಾರೆ. ಕೋವಿಡ್ -೧೯ನಿಂದ  ಇಡೀ ದೇಶವೇ ಲಾಕ್ ಡೌನ್  ಆಗಿತ್ತು. ಇದೀಗ  ಸರ್ಕಾರ ಅನ್ ಲಾಕ್ ಮಾಡಿದ್ದು, ಜನರು ಸಹಜಸ್ಥಿತಿ ಯತ್ತ ಮರಳುತ್ತಿದ್ದಾರೆ. ಅದರಲ್ಲಿ ನೇಕಾರರ ಕುಟುಂಬ ಒಂದು ಸಂಕಷ್ಟಕ್ಕೆ ಸಿಲುಕಿಕೊಂಡಿದೆ.  ಆ ಕುಟುಂಬಸ್ಥರು ಸೇವಾ ಭಾರತಿ ಪ್ರಮುಖರನ್ನು ಭೇಟಿ ಮಾಡಿ ತಮ್ಮ ಅಳಲನ್ನು ಹೇಳಿಕೊಂಡಿದ್ದರು . ೬ ಸಾವಿರ ಜನ ನೇಕಾರರು ತಮ್ಮ ಸೀರೆಯನ್ನು ಹೆಣೆದು ಮಾರಾಟ ಮಾಡುತಿದ್ದರು. ಆದರೆ ಕೊರೋನಾ ದಿಂದ ಮಾರಾಟವೇ ಸ್ಥಬ್ದವಾಗಿತ್ತು . ಇದ್ದರಿಂದ ಎಲ್ಲ ಕುಟುಂಬಗಳು ಸಿಕ್ಕಿಹಾಕಿಕೊಂಡಿದ್ದರು. ಅವರ ಸಹಾಯಕ್ಕಾಗಿ ಸೇವಾ ಭಾರತೀ ಪ್ರಮುಖರು ಒಂದು ಸಮಿತಿ ರಚನೆ ಮಾಡಿ ೨೦೦ ಬಡ ಕುಟುಂಬವನ್ನ ಆಯ್ಕೆ ಮಾಡಿ  ೮ರಿಂದ ೧೦ ಸಾವಿರ ಬೆಲೆ ಬಾಳುವ ಸೀರೆಯನ್ನ ಬೆಳಗಾವಿಯ ಧರ್ಮನಾಥ ಭವನದಲ್ಲಿ ಮಾರಾಟ ಮಳಿಗೆಯನ್ನ ತೆರೆದಿದ್ದಾರೆ. ಇದಕ್ಕೆ ಜಗ್ಗೇಶ್ ಅವರ ಮಡದಿ ಕೂಡ  ಕೈಜೋಡಿಸಿದ್ದಾರೆ. ಅವರಿಂದಲೇ ಆನ್ಲೈನ್ ಸೇವಾ ಕಾಟ್ ಸೀರೆ ಶಾಪಿಂಗ್ ಓಪನ್ ಆಗುತ್ತಿದೆ . ಸೀರೆಗಳು ತುಂಬಾ ಚೆನ್ನಾಗಿದೆ. ಹೀಗಾಗಿ ಎಲ್ಲ ಮಹಿಳಾಮಣಿಯರು ಸಹ ಸೀರೆಗಳನ್ನು ತೆಗದುಕೊಳ್ಳಿ ಎಂದು ಜಗ್ಗೇಶ್ ಅವರು ಮನವಿ ಮಾಡಿಕೊಂಡಿದ್ದಾರೆ. ವಿಶೇಷ ಅಂದರೆ ಸೀರೆ ಕೊಳ್ಳುದರ ಮೂಲಕ ನಮ್ಮಿಂದ ಮತ್ತೊಂದು ಕುಟುಂಬಕ್ಕೆ ಸಹಾಯವಾಗಲಿದೆ ಎಂದು  ಆನ್ಲೈನ್ ನಲ್ಲಿ  ಜಗ್ಗೇಶ್ ಪ್ರಮೋಟ್  ಮಾಡಿದ್ದಾರೆ.  ಸೇವಾ ಭಾರತಿಗೆ  ಭಾರತ  ಕ್ರೀಡಾಪಟು ವಿರಾಟ್ ಕೊಹಿಲಿ  ಕೈಜೋಡಿಸಿದ್ದಾರೆ. ಇದಕ್ಕೆ ಎಲ್ಲರು ಭಾಗಿಯಾಗಿ ಎಂದು ನವರಸ ಜಗ್ಗೇಶ್ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಅವರ ಕಾರ್ಯಕ್ಕೆ ೧ ಲಕ್ಷ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

LEAVE A REPLY

Please enter your comment!
Please enter your name here