ತುಂಬಾ ಜನ ಬದನೆ ಕಾಯಿ ಕೇವಲ ಆರೋಗ್ಯಕ್ಕೆ ಮಾತ್ರ ಉಪಯೋಗಿಸುತ್ತಾರೆ. ಇದರಿಂದ ಆರೋಗ್ಯಕ್ಕೆ ಯಾವುದೇ ಲಾಭವಿಲ್ಲವೆಂದುಕೊಂಡಿದ್ದಾರೆ. ಬದನೆ ಕಾಯಿಯಿಂದಲೂ ಆರೋಗ್ಯಕ್ಕೆ ಬಹಳ ಲಾಭವಿದೆ. ಬದನೆ ಕಾಯಿಯಿಂದ ಏನೆಲ್ಲಾ ಲಾಭವಿದೆ ನೋಡಿ..
ಬೆವರು:
ಕೈ ಬೆವರು ಹೆಚ್ಚುತ್ತಿದ್ದರೆ ಬದನೆ ಕಾಯಿಯನ್ನು ಚಿಕ್ಕ ಚಿಕ್ಕ ಗಾಲಿಗಳನ್ನು ಮಾಡಿಕೊಂಡು ಅದನ್ನು ನೀರಿನಲ್ಲಿ ನೆನೆಸಿಡಿ. ಆನಂತರ ಆ ನೀರಿನಲ್ಲಿ ಕೈಗಳನ್ನು 10 ನಿಮಿಷ ಅದ್ದಿಕೊಳ್ಳಿ. ದಿನವೂ ಹೀಗೆ ಮಾಡಿದರೆ ಕೈ ಬೆವರುವುದು ಕಡಿಮೆ ಆಗುತ್ತದೆ.
ತೂಕ ಇಳಿಕೆ:
ಬದನೆ ಕಾಯಿಯಲ್ಲಿ ಕ್ಯಾಲೋರಿಗಳು ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಇದರಲ್ಲಿ ಇರುವ ಕರುಗುವ ನಾರು ಹೆಚ್ಚುಹೊತ್ತು ಹೊಟ್ಟೆ ತುಂಬಿರುವ ಅನುಭವ ಕೊಡುತ್ತದೆ. ಇದರಿಂದಾಗಿ ಅನಗತ್ಯ ಆಹಾರ ಸೇವನೆಯನ್ನು ತಪ್ಪಿಸಬಹುದಾಗಿದೆ.
ಮಧುಮೇಹ:
ಮಧುಮೇಹವಿರುವವರಿಗೆ ಎಲ್ಲ ಆಹಾರಗಳೂ ಸೇವನೆಗೆ ಯೋಗ್ಯವಲ್ಲ. ಆದರೆ ಬದನೆ ಕಾಯಿಯಲ್ಲಿ ಸಿಹಿ ಅಂಶ ತುಂಬಾ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಬದನೆ ಕಾಯಿಯನ್ನು ಮಧುಮೇಹಿಗಳು ಸೇವಿಸಬಹುದು.
ನೆನಪಿನ ಶಕ್ತಿ:
ಬದನೆಯಲ್ಲಿರುವ ಫೈಟೋ ನ್ಯೂಟ್ರಿಯೆಂಟ್ ಗಳು ಜೀವಕೋಶಗಳ ಹೊರಪದರಗಳನ್ನು ಹಾನಿ ಗೊಳಗಾಗುವುದರಿಂದ ರಕ್ಷಿಸುತ್ತದೆ. ಅಲ್ಲದೇ ಇವು ಸ್ಮರಣಶಕ್ತಿಯನ್ನು ಹೆಚ್ಚಿಸುವ ಮತ್ತು ಮೆದುಳಿನ ಸಂಕೇತಗಳನ್ನು ದೇಹದ ವಿವಿಧ ಭಾಗಗಳಿಗೆ ರವಾನಿಸುವ ಕಾರ್ಯವನ್ನು ಉತ್ತಮಗೊಳಿಸುತ್ತದೆ.
ಗಾಯ:
ಬದನೆ ಎಲೆಗಳನ್ನು ಕೆಂಡದಲ್ಲಿ ಬಿಸಿ ಮಾಡಿ ಏಟುಬಿದ್ದ ಗಾಯದ ಮೇಲೆ ಕಟ್ಟಿದರೆ ನೋವು ಬೇಗ ಗುಣವಾಗುತ್ತದೆ.
ದೃಷ್ಟಿ ದೋಷ:
ಎಳೆಯ ಬದನೆಯನ್ನು ಹಸುವಿನ ತುಪ್ಪದಲ್ಲಿ ಹುರಿದು ಸೇವಿಸಿದರೆ ಕಣ್ಣಿನ ತೊಂದರೆ ದೂರವಾಗಿ ದೃಷ್ಟಿ ಸಾಮರ್ಥ್ಯ ಹೆಚ್ಚಿಸುತ್ತದೆ.