ಬದಿಯಡ್ಕ: ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ರೂಪೀಕರಣ ದಿನದ ಅಂಗವಾಗಿ ಜಿಲ್ಲೆಯಲ್ಲಿ ೨ ಲಕ್ಷ ಮಾಸ್ಕ್ ವಿತರಣೆ ಯೋಜನೆಯ ಅಂಗವಾಗಿ ಕಾಸರಗೋಡು ವಿಧಾನಸಭಾ ಮಂಡಲ ಸಮಿತಿಯ ವತಿಯಿಂದ ಮಾಸ್ಕ್ ವಿತರಣೆ ನಡೆಯಿತು.
ಆರೋಗ್ಯ ಇಲಾಖೆಯ ಕಾರ್ಯಕರ್ತ, ಕೊರೊನಾ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸಿದ ನಾರಾಯಣ ಬಾರಡ್ಕ ಅವರನ್ನು ಸನ್ಮಾನಿಸಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸುಧಾಮ ಗೋಸಾಡ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ ಅಧ್ಯಕ್ಷತೆ ವಹಿಸಿದ್ದರು. ರಾಮಪ್ಪ ಮಂಜೇಶ್ವರ, ನ್ಯಾಯವಾದಿ ಗಣೇಶ್ ಬಿ., ಡಿ.ಶಂಕರ, ಅವಿನಾಶ್ ರೈ, ಎಸ್.ಸಿ.ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾರಾಯಣನ್, ಹಿತೇಶ್ ಉಪಸ್ಥಿತರಿದ್ದರು. ಮಂಡಲ ಪ್ರ. ಕಾರ್ಯದರ್ಶಿಗಳಾದ ಪಿ.ಆರ್.ಸುನಿಲ್ ಸ್ವಾಗತಿಸಿ, ಸುಕುಮಾರ ಕುದ್ರೆಪ್ಪಾಡಿ ವಂದಿಸಿದರು.
ಭಾನುವಾರ ಮಂಡಲದ ವಿವಿಧೆಡೆಗಳಲ್ಲಿ ಕಾರ್ಯಕರ್ತರು ಮಾಸ್ಕ್ ವಿತರಿಸಿದರು.
- Advertisement -