Thursday, August 11, 2022

Latest Posts

ಬದಿಯಡ್ಕ ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆಯ ನಿಂದನೆ: ಬಿಜೆಪಿಯಿಂದ ಪ್ರತಿಭಟನೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಬದಿಯಡ್ಕ ಗ್ರಾಮಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆಯನ್ನು ನಿಂದಿಸಿ, ಅಪಮಾನಗೈದ ಗ್ರಾಪಂ ಕಾರ್ಯದರ್ಶಿ ಎಂ. ಪ್ರದೀಪನ್ ಅವರ ನಡೆಯನ್ನು ಖಂಡಿಸಿ ಬಿಜೆಪಿ ಜನಪ್ರತಿನಿಧಿಗಳ ನೇತೃತ್ವದಲ್ಲಿ ಗ್ರಾಮಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.
ಧರಣಿಯನ್ನು ಬಿಜೆಪಿ ಕಾಸರಗೋಡು ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್ ಪಿ.ಆರ್. ಉದ್ಘಾಟಿಸಿದರು. ಬಿಜೆಪಿ ಪಂಚಾಯಿತಿ ಸಮಿತಿ ಅಧ್ಯಕ್ಷ ಡಿ.ಶಂಕರ, ಕಾರ್ಯದರ್ಶಿ ಅವಿನಾಶ್ ರೈ ವಿ., ಮಹೇಶ್ ವಳಕ್ಕುಂಜ, ಮಹೇಶ್ ನಿಡುಗಳ, ಎಂ.ನಾರಾಯಣ ಭಟ್, ವಿಜಯ ಸಾಯಿ ಬದಿಯಡ್ಕ, ಕೃಷ್ಣ ಮಣಿಯಾಣಿ ಮೊಳೆಯಾರು, ದಾಮೋದರ ಚೆಟ್ಟಿಯಾರ್, ಬಾಲಕೃಷ್ಣ ಮಲ್ಲಡ್ಕ, ಜನಪ್ರತಿನಿಧಿಗಳಾದ ಕೆ.ಎನ್. ಕೃಷ್ಣ ಭಟ್, ವಿ. ಬಾಲಕೃಷ್ಣ ಶೆಟ್ಟಿ, ಸೌಮ್ಯ ಮಹೇಶ್, ಈಶ್ವರ ಮಾಸ್ತರ್, ಅನಿತ, ಶುಭಲತಾ, ಬ್ಲೋಕ್ ಪಂಚಾಯಿತಿ ಸದಸ್ಯೆಯರಾದ ಜಯಂತಿ, ಅಶ್ವಿನಿ, ಭಾಗವಹಿಸಿದ್ದರು.
ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷೆ ಸೌಮ್ಯ ಮಹೇಶ್ ಅವರನ್ನು ಕಾರ್ಯದರ್ಶಿ ಪ್ರದೀಪ್ ಹಲ್ಲೆಗೈದರೆಂದು ದೂರಲಾಗಿತ್ತು. ಗ್ರಾಪಂನ ೧೯ ವಾರ್ಡುಗಳಿಗೆ ನಿಧಿಯನ್ನು ಸಮಾನವಾಗಿ ಹಂಚಲು ಈ ಹಿಂದೆ ನಿಶ್ಚಯಿಸಲಾಗಿತ್ತು. ಆದರೆ ಕಾರ್ಯದರ್ಶಿಯವರು ಮುಸ್ಲಿಂಲೀಗ್ ವಾರ್ಡುಗಳಿಗೆ ಅಧಿಕ ನಿಧಿ ಮಂಜೂರುಗೊಳಿಸಿದ್ದರು. ಇದನ್ನು ಪ್ರಶ್ನಿಸಿದ ಬಿಜೆಪಿ ಜನಪ್ರತಿನಿಧಿ ಸೌಮ್ಯ ಮಹೇಶ್ ಮೇಲೆ ಕಾರ್ಯದರ್ಶಿ ಹಲ್ಲೆ ನಡೆಸಿದರೆಂದು ದೂರಲಾಗಿತ್ತು. ಸೌಮ್ಯ ಮಹೇಶ್ ಅವರು ಕಾರ್ಯದರ್ಶಿಯ ವೈಖರಿ ವಿರುದ್ಧ ಜಿಲ್ಲಾಧಿಕಾರಿ, ಡಿಸಿಸಿ, ಬದಿಯಡ್ಕ ಪೊಲೀಸರು ಎಂಬಿವರಿಗೆ ದೂರು ನೀಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss