ಹೊಸದಿಲ್ಲಿ: ಆರೋಗ್ಯವಿದ್ದರೆ ಭಾಗ್ಯ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಆದ್ದರಿಂದ ಈಗಿನ ಸನ್ನಿವೇಶದಲ್ಲಿ, ಧಾವಂತದ ಬದುಕಿನಲ್ಲಿ ಕೊನೆಯ ಪಕ್ಷ ಅರ್ಧ ಗಂಟೆಯನ್ನು ಫಿಟ್ನೆಸ್ಗೆ ಮೀಸಲು ಇರಿಸಿ, ಅದು ಧ್ಯಾನ, ಯೋಗ, ಪ್ರಾಣಾಯಾಮ ಯಾವುದೇ ರೂಪದಲ್ಲಿ ಇರಬಹುದು ಎಂದು ಹೇಳಿದರು.
ಫಿಟ್ ಇಂಡಿಯಾ ಚಳವಳಿಯ ಮೊದಲ ವಾರ್ಷಿಕೋತ್ಸವದ ಸಮಾರಂಭಕ್ಕಾಗಿ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಫಿಟ್ನೆಸ್ ದಿಗ್ಗಜರು ಹಾಗೂ ನಾಗರಿಕರೊಡನೆ ಆನ್ಲೈನ್ ಸಂವಾದ ನಡೆಸಿದರು.
ಯಾವುದೇ ವ್ಯಕ್ತಿ ತನ್ನ ದೇಹ ಸಧೃಡವಾಗಿ ಇಟ್ಟುಕೊಲ್ಳುವುದು ಮುಖ್ಯ. ಆರೋಗ್ಯವನ್ನು ಕಡಿಮೆ ಮಾಡಿಕೊಳ್ಳಬೇಡಿ, ಆದರೆ ತೂಕವನ್ನು ಕಡಿಮೆ ಮಾಡಿಕೊಳ್ಳಿ ಎಂದು ಪ್ರಧಾನಿ ಮೋದಿ ಹೇಳಿದರು.
ಕೊರೋನಾ ಸಂದರ್ಭದಲ್ಲಿ ನಾವು ಅಧಿಕ ಸಮಯ ಮನೆಯವರೆಲ್ಲರೂ ಒಟ್ಟಿಗೇ ಇದ್ದು, ಫಿಟ್ನೆಸ್ಗೆ ಸಾಕಷ್ಟು ಮಹತ್ವ ಕೊಟ್ಟಿರುವುದು ಒಳ್ಳೆಯ ಬೆಳವಣಿಗೆ, ಮಾತ್ರವಲ್ಲದೇ ಮನೆಯವರೆಲ್ಲರೂ ಒಗ್ಗಟ್ಟಾಗಿದ್ದು, ಪರಸ್ಪರ ಅರ್ಥ ಮಾಡಿಕೊಳ್ಳಲು ಇದು ಉತ್ತಮ ಸಮಯವಾಗಿದೆ ಎಂದು ಹೇಳಿದರು.
ಫಿಟ್ನೆಸ್ ನಿಂದ ಶರೀರ ಮಾತ್ರ ಸಮರ್ಥ ಮಾಡಿಕೊಂಡರೆ ಸಾಲದು ಮಾನಸಿಕವಾಗಿಯೂ ಸಮರ್ಥರಾಗುವುದು ಬಹುಮುಖ್ಯವಾದದ್ದು. ಅದರಲ್ಲಿಯೂ ಕರೊನಾದ ಈ ಬಿಕ್ಕಟ್ಟಿನ ಸಮಯದಲ್ಲಿ ಮಾನಸಿಕವಾಗಿ ಸದೃಢರಾಗಿ ಇರುವುದು ಬಹಳ ಮುಖ್ಯವಾಗಿದೆ. ಇದಕ್ಕಾಗಿ ಸ್ವಲ್ಪ ಸಮಯವನ್ನು ಧ್ಯಾನಕ್ಕಾಗಿ ಮೀಸಲು ಇರಿಸಬೇಕಿದೆ. ಇದರಿಂದ ಸಂಪೂರ್ಣವಾಗಿ ಮಾನಸಿಕ ಹಾಗೂ ಶಾರೀರಿಕವಾಗಿ ಫಿಟ್ನೆಸ್ ಪಡೆಯಬಹುದು ಎಂದು ಅವರು ಹೇಳಿದರು.
ವಿರಾಟ್ ಕೊಹ್ಲಿ, ಮಿಲಿಂದ್ ಸೋಮನ್, ರುಜುತಾ ದಿವೇಕರ್ ಮುಂತಾದವರು ಪಾಲ್ಗೊಂಡು , ತಮ್ಮ ಫಿಟ್ನೆಸ್ ಬದುಕನ್ನು ವ್ಯಾಖ್ಯಾನಿಸಿದರು. ಹಾಗೂ ಕೆಲವು ಸಲಹೆಗಳನ್ನೂ ಹಂಚಿಕೊಂಡರು. ನರೇಂದ್ರ ಮೋದಿ ಅವರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು.