ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಅಕ್ಷರ ಬ್ರಹ್ಮ ರವಿ ಬೆಳಗೆರೆ ಬರೆಯುತ್ತಲೇ ತಮ್ಮ ಬದುಕನ್ನು ಚೆಂದಗೊಳಿಸಿಕೊಂಡವರು. ರಾಶೀ ರಾಶೀ ಬರೆದು ಅಭಿಮಾನಿಗಳನ್ನು ಗಳಿಸಿದವರು. ಇಂದು ತಮ್ಮ ನೆಚ್ಚಿನ ಬರವಣಿಗೆ ಜತೆಜತೆಗೇ ಬದುಕನ್ನು ಮುಗಿಸಿದ್ದಾರೆ.
‘ರವಿ ಬೆಳಗೆರೆ’ ಈ ಒಂದು ಹೆಸರು ಅದೆಷ್ಟೋ ಯುವ ಮನಸ್ಸುಗಳನ್ನು ಕನ್ನಡ ಸಾಹಿತ್ಯದತ್ತ ಮತ್ತೆ ಮುಖಮಾಡುವಂತೆ ಮಾಡಿತ್ತು. ವರದಿಗಾರನಾಗಿ, ಸಂಪಾದಕನಾಗಿ, ಕಾದಂಬರಿಕಾರನಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ‘ಸ್ಟಾರ್ ಬರಹಗಾರ’ ನಾಗಿ ಪ್ರಸಿದ್ದರಾದವರು.
ಬಳ್ಳಾರಿಯಿಂದ ಬೆಂಗಳೂರಿಗೆ ಬಂದು ‘ಹಾಯ್ ಬೆಂಗಳೂರು’ ವಾರಪತ್ರಿಕೆಯನ್ನು ಆರಂಭಿಸಿದ್ದರು. ಈ ಪತ್ರಿಕೆ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತು. ಕಪ್ಪು ಸುಂದರಿ ಎಂದೇ ಎಲ್ಲೆಡೆ ಪ್ರಸಿದ್ಧಿ ಹೊಂದಿತು. ನಂತರ ‘ಓ ಮನಸೇ’ ಪಾಕ್ಷಿಕವನ್ನೂ ಆರಂಭಿಸಿದರು. ಈ ಪಾಕ್ಷಿಕ ಯುವ ಮನಸ್ಸಿನ ಮಾತಾಗಿ ಹೊರಹೊಮ್ಮಿತು.
ರಾಜ್ಯ ರಾಜಕಾರಣದ ಕುರಿತು ರೋಚಕ ಪುಸ್ತಕವೊಂದನ್ನು ಬರೆಯುತ್ತಿದ್ದ ಅವರಿಗೆ ಬರವಣಿಗೆಯಲ್ಲಿ ತೊಡಗಿದ್ದಾಲೇ ಹೃದಯಾಘಾತ ಸಂಭವಿಸಿದೆ. ಎಲ್ಲವೂ ಅಮದುಕೊಂಡಂತೇ ನಡೆದಿದ್ದರೆ ಇನ್ನಷ್ಟು ಪುಸ್ತಕ ನಮ್ಮೆದುರು ಸಾಲುಗಟ್ಟುತ್ತಿತ್ತು. ಆದರೆ ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಇನ್ನಿಲ್ಲ. ಅವರ ಬರವಣಿಗೆ ಇನ್ನು ನಮಗಿಲ್ಲ.