Monday, August 15, 2022

Latest Posts

ಬರೋಬ್ಬರಿ ಎರಡು ಲಕ್ಷ ಮಾಸ್ಕ್ ವಿತರಿಸಲು ಕಾಸರಗೋಡು ಬಿಜೆಪಿ ನಿರ್ಧಾರ

ಕಾಸರಗೋಡು: ಮೇ 24 ರಂದು ಕಾಸರಗೋಡು ಜಿಲ್ಲಾ ರೂಪೀಕರಣ ದಿನಾಚರಣೆಯ ಅಂಗವಾಗಿ ಜಿಲ್ಲೆಯಲ್ಲಿ ಎರಡು ಲಕ್ಷ ಮಾಸ್ಕ್ ಗಳನ್ನು ಬಿಜೆಪಿ ವಿತರಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ತಿಳಿಸಿದ್ದಾರೆ. ಜಿಲ್ಲಾ ರೂಪೀಕರಣದ ಭಾಗವಾಗಿ ಬಿಜೆಪಿ ನಡೆಸುವ ಅಭಿಯಾನದ ಪ್ರಯುಕ್ತ ಮಾಸ್ಕ್ ವಿತರಣೆಗೆ ಬಿಜೆಪಿ ಜಿಲ್ಲಾ ಘಟಕ ತೀರ್ಮಾನಿಸಿದೆ. ಕೋವಿಡ್ – 19 ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಜಿಲ್ಲೆಯ ಜನರ ಸುರಕ್ಷತೆಗಾಗಿ ಮಾಸ್ಕ್ ವಿತರಣೆ ನಡೆಸಲು ನಿರ್ಧರಿಸಲಾಗಿದೆ.
ವಾರ್ಡ್ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ತಯಾರು ಮಾಡುವ ಮಾಸ್ಕ್ಗಳನ್ನು ಜನರಿಗೆ ತಲುಪಿಸಲಿದ್ದಾರೆ. ಕೋವಿಡ್ ವೈರಸ್ ನ ಪ್ರತಿರೋಧದ ಅಂಗವಾಗಿ ಜನರೊಂದಿಗೆ ಸೇರಿ ನಡೆಸುವ ಈ ಕಾರ್ಯಕ್ರಮದಲ್ಲಿ ಎಲ್ಲರ ಪೂರ್ಣ ಸಹಕಾರ ನೀಡಬೇಕು ಎಂದು ಬಿಜೆಪಿ ಜಿಲಾಧ್ಯಕ್ಷ ಕೆ.ಶ್ರೀಕಾಂತ್ ವಿನಂತಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss