Tuesday, August 9, 2022

Latest Posts

ಬರೋಬ್ಬರಿ ಏಳು ತಿಂಗಳ ಬಳಿಕ ಬಂಗಾಳದಲ್ಲಿ ಕೇಳಿಸಿದೆ ರೈಲಿನ ಸದ್ದು!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬರೋಬ್ಬರಿ ಏಳು ತಿಂಗಳ ಬಳಿಕ ಉಪನಗರಗಳ ನಡುವೆ ರೈಲು ಓಡಾಟ ನಡೆಸಲು ಪಶ್ಚಿಮ ಬಂಗಾಳ ಸರಕಾರ ಹಸಿರುನಿಶಾನೆ ತೋರಿಸಿದೆ.

ಇಂದಿನಿಂದ ಪೂರ್ವ ರೈಲ್ವೆ  ಹಾಗೂ ಆಗ್ನೇಯ ರೈಲ್ವೆ  ಒಟ್ಟು  ೬೯೬ ಉಪನಗರಗಳಲ್ಲಿ ರೈಲು ಓಡಾಟ ಆರಂಭವಾಗಿದೆ. ಸೀಲ್ಡಾ, ಹೌರಾ ಮತ್ತು ಖರಗ್‌ಪುರ ವಿಭಾಗದಲ್ಲಿ ಕ್ರಮವಾಗಿ ೪೧೩, ೨೦೨ ಮತ್ತು ೮೧ ಉಪನಗರ ರೈಲುಗಳನ್ನು ಬುಧವಾರದಿಂದ ಓಡಿಸಲಾಗುತ್ತಿದೆ.

ಕೋವಿಡ್ ಮಹಾಮಾರಿಯಿಂದಾಗಿ ಕಳೆದ ಏಳು ತಿಂಗಳಿಗಿಂತ ಉಪನಗರ ರೈಲುಗಳು ಓಡಾಟ ಸ್ಥಗಿತಗೊಳಿಸಿದ್ದವು.

ರೈಲ್ವೆಯ ಸ್ವಂತ ಭದ್ರತಾ ಪಡೆ ಪ್ರಯಾಣಿಕರ ಆರೋಗ್ಯ ಸುರಕ್ಷತೆಯ ಬಗ್ಗೆ ಕಟ್ಟೆಚ್ಚರ ವಹಿಸಿದೆ. ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ, ಪ್ರಯಾಣಿಕರನ್ನು ಥರ್ಮಲ್ ಸ್ಕ್ಯಾನರ್‌ಗಳೊಂದಿಗೆ ಪರಿಶೀಲಿಸಲಾಗುತ್ತಿದೆ ಅಲ್ಲದೆ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಕಷ್ಟು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ಸರತಿ ಸಾಲು ವ್ಯವಸ್ಥೆಯನ್ನು ಭದ್ರತಾ ಸಂಸ್ಥೆಗಳು ನೋಡಿಕೊಳ್ಳುತ್ತಿವೆ.
ಈ ನಡುವೆ ಮುಂಬರುವ ಕಾಳಿ ಪೂಜೆಯ ಸಮಯದಲ್ಲಿ ಸ್ಥಳೀಯ ರೈಲುಗಳನ್ನು ಸ್ಥಗಿತಗೊಳಿಸಬಹುದೇ ಅಥವಾ ಸೇವೆಗಳನ್ನು ನಿರ್ಬಂಧಿಸಬಹುದೇ ಎಂದು ಪರಿಗಣಿಸುವಂತೆ ಕೋಲ್ಕತ್ತಾ ಹೈಕೋರ್ಟ್ (ಎಚ್‌ಸಿ) ಮಂಗಳವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss