ಯಾದಗಿರಿ: ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ನೇರೆಯ ಆಂಧ್ರಪ್ರದೇಶದ ಕರ್ನೂಲ ಜಿಲ್ಲೆಯ ಶ್ರೀಶೈಲಂ ಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನ ಕಳೆದ 4 ತಿಂಗಳಿನಿಂದ ಕೋರೊನಾ ವೈರಸ ದಾಳಿಯಿಂದ ಮುಚ್ಚಲಾಗಿತ್ತು, ಆದರೆ ದೇವಸ್ಥಾನ ಆಡಳಿತ ಮಂಡಳಿಯವರು ಶುಕ್ರವಾರ ದೇವಸ್ಥಾನವನ್ನು ಸಂಪೂರ್ಣ ಸ್ಯಾನಿಟೈಸರ್ ಮಾಡಿ ಶನಿವಾರ ಬೆಳಿಗ್ಗೆಯಿಂದ ಭಕ್ತರ ದರ್ಶನ ಪಡೆಯಲು ಅವಕಾಶ ಕಲ್ಪಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶ್ರಾವಣ ಮಾಸ ಹಿಂದೂಗಳಿಗೆ ಪವಿತ್ರವಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗಗಳಿಂದ ಜನರು ಶ್ರೀಶೈಲಂಗೆ ಬೇಟಿ ನೀಡಿ, ಸಪ್ತನದಿಗಳ ಸಂಗಮ ಪಾತಾಳಗಂಗೆಯಲ್ಲಿ ಪುಣ್ಯಸ್ನಾನ ಮಾಡಿ ಸಾಕ್ಷಿ ಗಣಪತಿ, ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ, ಶಿಖರೇಶ್ವರ ಸೇರಿದಂತೆ ಹಲವಾರು ದೇವಸ್ಥಾನಕ್ಕೆ ತೆರಳಿ, ದರ್ಶನ ಪಡೆದು ಶ್ರೀಶೈಲಂ ಜಗದ್ಗುರುಗಳಾದ ಡಾ. ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಜಿ ಆಶೀರ್ವಾದ ತೆಗೆದುಕೊಂಡು ಬರುವುದು ವಾಡಿಕೆ.
ಭಕ್ತರು ದೇವಸ್ತಾನದ ಕೇಲ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದು ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಮುಖ್ಯ ಅರ್ಚಕರಾದ ಗುರುಪಾದಯ್ಯಸ್ವಾಮಿ ತಿಳಿಸಿದ್ದಾರೆ.