Sunday, February 28, 2021

Latest Posts

ಬರೋಬ್ಬರಿ ನಾಲ್ಕು ಸಾವಿರ ಬಾಯಿಗಳಿಗೆ ದಿನ ನಿತ್ಯ ತಪ್ಪಿಸದೇ ತುತ್ತು ನೀಡ್ತಾರೆ ಈ ಜೋಸೆಫ್ ಸೇಖರ್!!

ಮನೆಯಲ್ಲಿ ಎಷ್ಟು ಪ್ರಾಣಿ ಪಕ್ಷಿಗಳನ್ನು ಸಾಕುತ್ತಿದ್ದೀರಾ? ಎರಡು ಮೂರು? ಇನ್ನೂ ಹೆಚ್ಚೆಂದರೆ ಮೃಗಾಲಯಗಳಲ್ಲಿರುವ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದು ಅವುಗಳಿಗೆ ಆಹಾರ ನೀಡಬಹುದು.. ಆದರೆ ಪ್ರತಿದಿನ ನಾಲ್ಕು ಸಾವಿರ ಪಕ್ಷಿಗಳಿಗೆ ಎರಡು ಬಾರಿ ಆಹಾರ ನೀಡುತ್ತೀರಾ?
ಏನಿದು ಅಸಾಧ್ಯವಾದ ವಿಷಯಗಳನ್ನೇಕೆ ಹೇಳುತ್ತಿದ್ದೀರಿ ಎಂದುಕೊಳ್ಳುತ್ತಿದ್ದೀರಾ? ಇದು ಅಸಾಧ್ಯವಲ್ಲ, ಇಷ್ಟಸಾಧ್ಯ.
ಹೌದು ಚೆನ್ನೈನ ಜೋಸೆಫ್ ಸೇಖರ್ ಅವರ ಮನೆಗೆ ಒಮ್ಮೆ ಭೇಟಿ ನೀಡಿ. ಆಗ ನಿಮಗೇ ನಾವು ಹೇಳುವ ಈ ಅಸಾಮಾನ್ಯ ಕಥೆ ಬಗ್ಗೆ ತಿಳಿಯುತ್ತದೆ.
ಜೋಸೆಫ್ ಬರೋಬ್ಬರಿ 16 ವರ್ಷಗಳಿಂದ ದಿನಕ್ಕೆರಡು ಬಾರಿ ನಾಲ್ಕು ಸಾವಿರ ಪಕ್ಷಿಗಳಿಗೆ ಆಹಾರ ನೀಡುತ್ತಿದ್ದಾರೆ.
ಚೆನ್ನೈನ ಸಿಟಿ ಏರಿಯಾದಲ್ಲಿ ಇರುವ ಈ ಮನೆಗೆ ಪಕ್ಷಿಗಳೇಕೆ ಭೇಟಿ ನೀಡುತ್ತದೆ? ಜೋಸೆಫ್ ಪಕ್ಷಿಗಳಿಗಾಗಿ ತನ್ನ ಸಂಬಳದ ನಲವತ್ತು ಭಾಗವನ್ನೇಕೆ ಮೀಸಲಿಡುತ್ತಾರೆ? ನೋಡೋಣ ಬನ್ನಿ..
2004ರಲ್ಲಿ ಸುನಾಮಿ ಆಗಿದ್ದರ ಬಗ್ಗೆ ಎಲ್ಲರಿಗೂ ಗೊತ್ತಿದೆ, ಚೆನ್ನೈ ಸಿಟಿಯಲ್ಲಿ ಇದರಿಂದಾಗಿ ಸುಮಾರು ಹಾನಿಯಾಯ್ತು. ಹಲವಾರು ಪಕ್ಷಿಗಳು ತಮ್ಮ ನೆಲೆ ಕಳೆದುಕೊಂಡವು. ಹೀಗೆ ನಾಲ್ಕು ಪಕ್ಷಿಗಳು ಜೋಸೆಫ್ ಮನೆಯ ಮೇಲೆ ಬಂದು ಕುಳಿತವು. ಅವುಗಳನ್ನು ಓಡಿಸಲು ಜೋಸೆಫ್ ಯತ್ನಿಸಲಿಲ್ಲ. ಬದಲಿಗೆ ಅವುಗಳಿಗೆ ಆಹಾರ ನೀಡಿದರು. ಇದರಿಂದಾಗಿ ನಾಲ್ಕು ಗಿಳಿಗಳು ತಮ್ಮ ಇತರೆ ಸ್ನೇಹಿತರನ್ನು ಕರೆತಂದವು, ಆ ಸ್ನೇಹಿತರು ಇತರೆ ಸ್ನೇಹಿತರನ್ನು ಕರೆತಂದವು. ಹೀಗೆ ಪ್ರತಿದಿನವೂ ಗಿಳಿಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಈ ಸಂಖ್ಯೆ ನಾಲ್ಕು ಸಾವಿರಕ್ಕೆ ಬಂದು ನಿಂತಿದೆ. ಈ ಆಹಾರ ನೀಡುವ ಪದ್ಧತಿ ಹದಿನಾರು ವರ್ಷಗಳಿಂದ ನಡೆಯುತ್ತಲೇ ಇದೆ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ 75 ಕೆಜಿ ಅಕ್ಕಿಯಿಂದ ಅನ್ನ ಮಾಡಿ ಪಕ್ಷಿಗಳು ತಿನ್ನಲು ಅಣಿ ಮಾಡುತ್ತಾರೆ. ಗಿಳಿಗಳ ಜೊತೆ ಜೋಸೆಫ್ ಬೆರೆತು ಹೋಗಿದ್ದಾರೆ. ಅವರ ದೈನಂದಿನ ಕೆಲಸದ ಜೊತೆಗೆ ಇದು ಅವರಿಗೆ ಪ್ರತಿದಿನದ ಇಷ್ಟದ ಕಾರ್ಯ.
ದೇವರ ಉಡುಗೊರೆಯಿದು:
ಎಲ್ಲರ ಮನೆ ಮೇಲೆಯೂ ಪಕ್ಷಿಗಳು ಬಂದು ಕೂರುವುದಿಲ್ಲ. ನಮ್ಮ ಮನೆ ಮುಂದೆಯೇ ಬಂದು ಕೂರುತ್ತವೆ ಎಂದರೆ ಇದು ದೇವರು ನನಗೆ ನೀಡಿರುವ ಉಡುಗೊರೆ. ಇವುಗಳಿಗೆ ಆಹಾರ ನೀಡುವುದು ನನಗೆ ಕಷ್ಟದ ಕೆಲಸವಲ್ಲ, ಖುಷಿಯ ಕೆಲಸ. ಇದಕ್ಕಿಂತ ಹೆಚ್ಚಿನ ಸಂತೋಷ ಇನ್ನೇನಿದೆ ಎಂದು ಜೋಸೆಫ್ ಹೇಳುತ್ತಾರೆ.
ಆಹಾರ ತಯಾರಿಕೆ ಹೇಗೆ?:
ಪ್ರತಿದಿನ ಬೆಳಗ್ಗೆ 4:30 ಕ್ಕೆ ಎದ್ದು,75 ಕೆ.ಜಿ. ಅಕ್ಕಿ ತಂದು ಅನ್ನ ಮಾಡಿ, ಮಹಡಿಯ ಮೇಲೆ ಪಕ್ಷಿಗಳಿಗೆ ಆಹಾರ ನೀಡಲು ಹಲಗೆ ಹಾಕುತ್ತಾರೆ. ಪಕ್ಷಿಗಳು ಅವುಗಳ ಸಮಯಕ್ಕೆ ಬಂದು ತಿಂದು ಹೋಗುತ್ತವೆ. ಪಕ್ಷಿಗಳಿಗೆ ಆಹಾರ ನೀಡುವ ಸಲುವಾಗಿ ಜೋಸೆಫ್ 27 ವರ್ಷಗಳಿಂದ ಮನೆಯನ್ನು ಬಿಟ್ಟು ಹೋಗಿಯೇ ಇಲ್ಲ.
ಮುಂದಿನ ಕನಸೇನು?:
ಜೋಸೆಫ್ ಅವರು ಈಗಿರುವ ಮನೆ ಬಾಡಿಗೆಯದ್ದು. ಇದೇ ಮನೆಯನ್ನು ಕೊಂಡು ತಾವು ಸಾಯುವವರೆಗೂ ಹಕ್ಕಿಗಳಿಗೆ ಆಹಾರ ನೀಡಬೇಕು ಎನ್ನುವುದು ಇವರ ಕನಸು. ಹಕ್ಕಿಗಳು ಮಕ್ಕಳಂತೆ, ಇವರನ್ನು ಬಿಟ್ಟು ಎಲ್ಲಿ ಹೋಗಲಿ ಎನ್ನುತ್ತಾರೆ ಪಕ್ಷಿಪಿತ ಜೋಸೆಫ್.
ಏನನ್ನೂ ಅಪೇಕ್ಷಿಸದೇ ಜೋಸೆಫ್ ಮಾಡುತ್ತಿರುವ ಕೆಲಸಕ್ಕೆ ಸಾಟಿಯೇ ಇಲ್ಲ!! ಇವರಿಗೆ ನಮ್ಮದೊಂದು ಸಲಾಂ..

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!