ಅಹಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂದಿಳಿದ ಕ್ಷಣದಿಂದ ಪಟ್ಟಣದಲ್ಲೀಗ ಅಕ್ಷರಶಃ ಹಬ್ಬದ ವಾತಾವರಣ ಉಂಟಾಗಿದೆ.
ವಿಮಾನ ನಿಲ್ದಾಣದಿಂದ ಸಾಬರ್ ಮತಿ ಆಶ್ರಮದವರೆಗೆ ಟ್ರಂಪ್, ಮೋದಿ 22 ಕಿಲೋ ಮೀಟರ್ ದೂರದವರೆಗೆ ರೋಡ್ ಶೋ ಆರಂಭವಾಗಿದೆ. ರಸ್ತೆಯ ಇಕ್ಕೆಲಗಳಲ್ಲಿಯೂ ಜನರು ಕೈಬೀಸುವ ಮೂಲಕ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಗುಜರಾತ್ನ ಅಹಮದಾಬಾದ್ಗೆ ಸೋಮವಾರ ಬಂದಿಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡಲಾಗಿದ್ದು, ಟ್ರಂಪ್ ಅಹಮದಾಬಾದ್ ನಿಂದ ರೋಡ್ ಶೋ ಮೂಲಕ ತೆರಳಿ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.
ಅಮೆರಕ ಅದ್ಯಕ್ಷರ ಭೇಟಿಯ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ.