ಹೊಸ ದಿಗಂತ ವರದಿ ಆನ್ ಲೈನ್ ಡೆಸ್ಕ್
35 ವರ್ಷಗಳಿಂದ ಪಾಕಿಸ್ತಾನದ ಮೃಗಾಲಯದಲ್ಲಿ ಏಕಾಂಗಿಯಾಗಿದ್ದ ಕಾವನ್ ಎಂಬ ಆನೆಗೆ ಕೊನೆಗೂ ಮುಕ್ತಿ ದೊರೆತಿದೆ.
ಈ ಕಾವನ್ ಆನೆಯನ್ನು ಅಮೆರಿಕಾದ ಪಾಪ್ ಗಾಯಕಿ ಚೇರ್ ಭಾನುವಾರ ಪಾಕಿಸ್ತಾನದಿಂದ ಕಾಂಬೋಡಿಯಾಕ್ಕೆ ಕೊಂಡೊಯ್ಯಲಿದ್ದಾರೆ. ಈ ಬಗ್ಗೆ ಶುಕ್ರವಾರ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಚೇರ್ ಭೇಟಿ ಮಾಡಿ ಮಾತುಕತೆ ನಡೆಸಿದರು.
ಆನೆಯನ್ನು ಕಾಂಬೋಡಿಯಾಕ್ಕೆ ಕೊಂಡು ಹೋಗಲು ಸಹಾಯ ಮಾಡಿದ ಇಮ್ರಾನ್ ಖಾನ್ ಅವರಿಗೆ ಟ್ವಿಟ್ಟರ್ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ಮತ್ತೊಂದೆಡೆ ಆನೆಯನ್ನು ಕಾಂಬೋಡಿಯಾಕ್ಕೆ ಸ್ಥಳಾಂತರಿಸಲು ಮುಂದೆ ಬಂದಿರುವ ಗಾಯಕಿ ಚೇರ್ ಅವರ ಉತ್ಸಾಹಕ್ಕೂ ಪ್ರಧಾನಿ ಇಮ್ರಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ