ಹೊಸ ದಿಗಂತ ಆನ್ಲೈನ್ ಡೆಸ್ಕ್:
ಬರೋಬ್ಬರಿ ಎಂಟು ತಿಂಗಳ ಬಳಿಕ ಕಾಸರಗೋಡು ಮಂಗಳೂರು ನಡುವೆ ಬಸ್ಸು ಸಂಚಾರ ಆರಂಭವಾಗಿದೆ.
ಸೋಮವಾರದಿಂದ ಕೆಎಸ್ಆರ್ಟಿಸಿ ಬಸ್ಸುಗಳು ಸಂಚಾರ ಆರಂಭಿಸಿದ್ದು, ಕರ್ನಾಟಕ ಹಾಗೂ ಕೇರಳದಿಂದ ತಲಾ ೨೦ ಬಸ್ಸುಗಳು ಏಳು ನಿಮಿಷಗಳ ಅಂತರದಲ್ಲಿ ಓಡಾಟ ಆರಂಭಿಸಿವೆ. ಇದರೊಂದಿಗೆ ಉಭಯ ಜಿಲ್ಲೆಯ ಜನತೆ ಎದುರಿಸುತ್ತಿದ್ದ ಭಾರೀ ಸಮಸ್ಯೆಯೊಂದು ಬಗೆಹರಿದಂತಾಗಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಕಾಸರಗೋಡು ಮಂಗಳೂರು ನಡುವೆ ಬಸ್ಸು ಸಂಚಾರ ಮಾರ್ಚ್ನಿಂದ ಸ್ಥಗಿತಗೊಂಡಿತ್ತು. ಬಳಿಕ ಬಸ್ ಓಡಾಟ ಪುನರಾರಂಭಿಸುವಂತೆ ಭಾರೀ ಆಗ್ರಹಗಳು ಕೇಳಿ ಬಂದರೂ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಬಸ್ ಸಂಚಾರ ಆರಂಭವಾಗಿರಲಿಲ್ಲ.
ಮಂಗಳವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಿಮ ವರ್ಷದ ಯುಜಿ, ಪಿಜಿ ವಿದ್ಯಾರ್ಥಿಗಳಿಗೆ ನ. ೧೭ ರಿಂದ ಕಾಲೇಜು ಆರಂಭವಾಗಲಿದ್ದು ಬಸ್ ಓಟಾಟ ಆರಂಭವಾಗಿರುವುದು ಕಾಸರಗೋಡಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.