Sunday, June 26, 2022

Latest Posts

ಬರೋಬ್ಬರಿ 8 ವರ್ಷದ ಬಳಿಕ ಸೆರೆಯಾದ ಶ್ರೀಗಂಧ ಕಳವು ಆರೋಪಿ!

ಹೊಸ ದಿಗಂತ ವರದಿ, ಕುಶಾಲನಗರ:

ಎಂಟು ವರ್ಷಗಳಿಂದ ಹಿಂದೆ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಜೇನುಕಲ್ಲು ಬೆಟ್ಟದಲ್ಲಿ
ಶ್ರೀಗಂಧದ ಮರವನ್ನು ಕಡಿದು ಸಾಗಾಟ ಮಾಡುವ ಸಂದರ್ಭ ತಪ್ಪಿಸಿಕೊಂಡಿದ್ದ ಅರೋಪಿಯನ್ನು ಕುಶಾಲನಗರ ಗ್ರಾಮಾಂತರ
ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕುಳ್ಳಯ್ಯ ಎಂದು ಗುರುತಿಸಲಾಗಿದ್ದು, ಆತನನ್ನು ಪಿರಿಯಾಪಟ್ಟಣದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬೈಲುಕೊಪ್ಪ ಠಾಣಾಧಿಕಾರಿ ಮಾರ್ಗದರ್ಶನದಲ್ಲಿ ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣಾಧಿಕಾರಿ ಶಿವಶಂಕರ್ ನೇತೃತ್ವದಲ್ಲಿ ಎಎಸ್‍ಐ ಹೆಚ್.ಎಸ್ ರವಿ, ಪ್ರೊಬೆಷನರಿ ಪಿ ಎಸ್ ಐ ಶರವಣದಾಸ್ ರೆಡ್ಡಿ, ಸಿಬ್ಬಂದಿ ಶಫೀನ್ ಅಹಮದ್ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss