ಬರ್ಕ್ ಲಿ ಸಿಗರೇಟ್ ಪ್ಯಾಕ್ ಮೇಲಿತ್ತು ಜಯಮಾಲಾ ಜನ್ಮ ದಿನಾಂಕ

0
115

ಬೆಂಗಳೂರು: ಕೊರೋನಾ ವೈರಸ್‌ಗಿಂತ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎನ್‌ಪಿಆರ್, ಎನ್‌ಆರ್‌ಸಿ ಪ್ರಕ್ರಿಯೆಗಳು ಮಾರಕವಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯೆ ಡಾ. ಜಯಮಾಲಾ ಸದನದಲ್ಲಿ ತಿಳಿಸಿದರು. ಅಲ್ಲದೆ, ನನ್ನ ಅಪ್ಪ ಬರ್ಕ್‌ಲಿ ಸಿಗರೇಟ್ ಪ್ಯಾಕ್ ಮೇಲೆ ನನ್ನ ಜನ್ಮದಿನಾಂಕ ಬರೆದು ಕಳುಹಿಸಿದ್ದು, ಜನನ ಪ್ರಮಾಣಪತ್ರ ಎಲ್ಲಿಂದ ತರಲಿ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್‌ನಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಸಂವಿಧಾನ ಮೇಲಿನ ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, ನನ್ನ ಬಾಲ್ಯ ಎಲ್ಲವೂ ಚಿಕ್ಕಮಗಳೂರಿನಲ್ಲಿ ಕಳೆದೆ. ಶಾಲೆ ಸೇರುವಾಗ ನಮ್ಮ ಅಪ್ಪ ಬರ್ಕ್‌ಲಿ ಸಿಗರೇಟ್ ಪ್ಯಾಕ್ ಮೇಲೆ ಜನ್ಮ ದಿನ ಬರೆದು, ಕಳುಹಿಸಿದ್ದ. ಆದರೆ, ಈಗ ನನ್ನ ಅಪ್ಪ, ಅಜ್ಜನ  ಜನನ ಪ್ರಮಾಣ ಎಲ್ಲಿಂದ ತೆಗೆದುಕೊಂಡು ಬರುವುದು ಎಂದು ಪ್ರಶ್ನಿಸಿದರು.

ಕೊರೋನ ವೈರಸ್ ಬಗ್ಗೆ ಆತಂಕ ಇರುವಂತೆ, ಹತ್ತುಪಟ್ಟು ಹೆಚ್ಚು ಎನ್‌ಪಿಆರ್, ಎನ್‌ಆರ್‌ಸಿ ಬಗ್ಗೆ ಇದೆ. ಇದರಲ್ಲಿ ಪ್ರಮುಖವಾಗಿ ಜನನ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಹೇಳ ಲಾಗುತ್ತದೆ. ಆದರೆ, ಕೋಟ್ಯಂತರ ಜನರ ಬಳಿ ಈ ದಾಖಲೆಗಳು ಇಲ್ಲ. ಆದರೂ ಸರ್ಕಾರ ಹಠಕ್ಕೆ ಬಿದ್ದು ಜಾರಿಗೆ ಮುಂದಾಗಿದೆ ಎಂದು ಆರೋಪಿಸಿದರು. ಆಡಳಿತ ಮತ್ತು ವಿರೋಧಪಕ್ಷದಲ್ಲಿ ಶೇ.5 ರಷ್ಟು ನಾಯಕರು ಕಿಚ್ಚು ಹಚ್ಚುವವರಿದ್ದಾರೆ. ಹೀಗಾಗಿ ಅವರ ಮಾತನ್ನು ಕೇಳದೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಅದಕ್ಕೆ ಎಲ್ಲರ ಸಹಮತ ಇರಬೇಕು. ಏಳು ಧರ್ಮಗಳಲ್ಲಿ ಒಂದು ಧರ್ಮವನ್ನು ಪ್ರತ್ಯೇಕವಾಗಿ ಮಾಡಿದರೆ ಅವರಿಗೆ ನೋವಾಗುವುದಿಲ್ಲವೇ. ಹೀಗಾಗಿ ಅಂತವರ ಮಾತನ್ನು ಸರ್ಕಾರ ಕೇಳಬಾರದು ಎಂದು ಮನವಿ ಮಾಡಿದರು.

LEAVE A REPLY

Please enter your comment!
Please enter your name here