Saturday, July 2, 2022

Latest Posts

ಬಳಕೆದಾರರ ಶುಲ್ಕ ಏರಿಕೆ ಖಂಡಿಸಿ ಎಪಿಎಂಸಿ ಮಾರುಕಟ್ಟೆ ಬಂದ್: ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ

ಹೊಸದಿಗಂತ ವರದಿ,ಕೋಲಾರ:

ಬಳಕೆದಾರರ ಶುಲ್ಕವನ್ನು ಸರಕಾರ ೩೫ ಪೈಸೆಯಿಂದ ಏಕಾಏಕಿ ೧ ರೂಗೆ ಏರಿಕೆ ಮಾಡಿರುವುದನ್ನು ಖಂಡಿಸಿ ಮಂಡಿ ಮಾಲೀಕರು ತಮ್ಮ ವಹಿವಾಟು ಸ್ಥಗಿತಗೊಳಿಸಿದ್ದರಿಂದಾಗಿ ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆಯು
ಸೋಮವಾರ ಬಂದ್ ಆಗಿತ್ತು.
ಸದಾ ವಾಹನಗಳು, ರೈತರು, ವ್ಯಾಪಾರಸ್ಥರು, ಹಮಾಲರಿಂದ ತುಂಬಿತುಳುಕುತ್ತಿದ್ದ ಮಾರುಕಟ್ಟೆ ಸೋಮವಾರ ಇಡೀ ದಿನ ಖಾಲಿ ಖಾಲಿಯಾಗಿದ್ದು,ಬಿಕೋ ಎನ್ನುತ್ತಿತ್ತು.
ಡಿ.೨೧ ರ ಸೋಮವಾರದಂದು ಕೋಲಾರ, ಶ್ರೀನಿವಾಸಪುರ, ಎನ್.ವಡ್ಡಹಳ್ಳಿಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಬಂದ್ ಮಾಡಲು ನಿರ್ಧರಿಸಲಾಗಿದೆ.ಕೋಲಾರ ಜೈ ಕರ್ನಾಟಕ ದಲ್ಲಾಳರ ಸಂಘ, ಜೈ ಭಾರತ್ ವರ್ತಕರ ಸಂಘ,ಜೆ.ಎನ್.ಜೆ ತರಕಾರಿ ಮಂಡಿ ಮಾಲೀಕರ ಸಂಘ, ಹಮಾಲರ ಸಂಘ ಸೇರಿದಂತೆಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಲಾಗಿದೆ.
ಆದ್ದರಿಂದ ರೈತ ಬಾಂಧವರು ಹಣ್ಣು ಮತ್ತು ತರಕಾರಿಗಳನ್ನು ಸೋಮವಾರದವಹಿವಾಟಿಗೆ ತರಬಾರದೆಂದು ಶನಿವಾರವೇ ಪ್ರಕಟಣೆಯಲ್ಲಿ ತಿಳಿಸಿದ್ದರಿಂದಾಗಿ ರೈತರು ಸಹ ತರಕಾರಿಗಳನ್ನು ತಂದಿರಲಿಲ್ಲ. ಅಲ್ಲದೆ ಮಾರುಕಟ್ಟೆ ಕಡೆಗೂ ಯಾರೂ ಬಾರಲಿಲ್ಲ.
ಇನ್ನು ಎಪಿಎಂಸಿಯಲ್ಲಿ ಮಂಡಿಗಳನ್ನು ತೆರೆಯದೆ ಬಂದ್ ಮಾಡಿದ್ದ ವರ್ತಕರುತಮ್ಮ ಸಮಸ್ಯೆಯನ್ನು ಬಗೆಹರಿಸಲು ೭ ದಿನಗಳ ಗಡುವು ನೀಡಿ ಎಪಿಎಂಸಿಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾಡಳಿತ ಮೂಲಕ ಸರಕಾರಕ್ಕೆ ಮನವಿಸಲ್ಲಿಸಿದರು.
ಈ ವೇಳೆ ಮಾತನಾಡಿದ ಜೈಕರ್ನಾಟಕ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘದಪದಾಧಿಕಾರಿಗಳು, ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ವ್ಯಾಪಾರಸ್ಥರಿಗೆ ವಹಿವಾಟು ಪ್ರಕ್ರಿಯೆಯಲ್ಲಿ ಸಾಕಷ್ಟು ಕಾರಣಗಳಿಂದಾಗಿ ಕೆಡುವ ಉತ್ಪನ್ನಗಳಾದ ಟೊಮೆಟೊ ಹಣ್ಣು, ತರಕಾರಿ ಸರಿಯಾದ ಸಮಯಕ್ಕೆ ವಿಲೇವಾರಿಯಾಗದೆ ಸಾಕಷ್ಟು ನಷ್ಟ ಅನುಭವಿಸುವಂತಾಗಿತ್ತು.
ಅದರ ಪರಿಣಾಮವಾಗಿ ಮಂಡಿ ಮಾಲೀಕರಿಗೆ ಹಣವೂ ಪಾವತಿಯಾಗದಿದ್ದರೂ ಸಾಲ ಮಾಡಿ ರೈತರಿಗೆ ಹಣ ಪಾವತಿಸಿದ್ದೆವು. ಅದನ್ನು ಮನಗಂಡು ಸರಕಾರಬಳಕೆದಾರರ ಶುಲ್ಕವನ್ನು ೧ರೂ ನಿಂದ ೩೫ ಪೈಸೆಗೆ ಇಳಿಕೆ ಮಾಡಿ ರೈತರು,ಮಂಡಿ ಮಾಲೀಕರು, ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಿತ್ತು.
ಆದರೆ ಇದೀಗ ಏಕಾಏಕಿ ೧ ರೂಗೆ ಏರಿಕೆ ಮಾಡಿರುವುದು ಖಂಡನೀಯವಾಗಿದೆ. ಬೇರೆ ರಾಜ್ಯಗಳಲ್ಲಿ ಬಳಕೆದಾರರ ಯಾವುದೇ ರೀತಿಯ ಶುಲ್ಕಗಳೇ ಇಲ್ಲ. ಹೀಗಿದ್ದರೂ ೩೫ ಪೈಸೆ ನಾವು ನೀಡುತ್ತಿದ್ದು, ೧ರೂಗೆ ಏರಿಕೆ ಮಾಡಿರುವುದನ್ನು ಕೂಡಲೇ ಸರಕಾರ ವಾಪಸ್ಸು ಪಡೆದುಕೊಳ್ಳಬೇಕಿದೆ. ಇಲ್ಲವಾದಲ್ಲಿ ೭ ದಿನಗಳ ಬಳಿಕ ಮತ್ತೆ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜೈಕರ್ನಾಟಕ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷಆರ್.ಎ.ನಾರಾಯಣಸ್ವಾಮಿ, ಉಪಾಧ್ಯಕ್ಷ ಕೆ.ಆರ್.ಬೈಚೇಗೌಡ, ಕಾರ್ಯದರ್ಶಿ ಕೆ.ಎನ್.ಪ್ರಕಾಶ್, ಖಜಾಂಚಿ ಸೈಯದ್ ಸಾಧಿಕರ್ ಸಲಹೆಗಾರರಾದ ಸಿಎಂಆರ್ ಶ್ರೀನಾಥ್, ಎಂಎನ್‌ಆರ್ ಮುನೇಗೌಡ ಮತ್ತಿತರರು ಉಪಸ್ಥಿತರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss