Wednesday, August 17, 2022

Latest Posts

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಕೊರೋನಾ ಪಾಸಿಟಿವ್ ದೃಢ: ಬಳ್ಳಾರಿ ಭೇಟಿ ರದ್ದು

ಬಳ್ಳಾರಿ: ಮಾಜಿ ಸಚಿವ ಗಾಲಿ ‌ಜನಾರ್ದನ ರೆಡ್ಡಿ ಅವರ ಆ.30 ಹಾಗೂ 31ರಂದು ಎರಡು ದಿನಗಳ‌ ಕಾಲ ಬಳ್ಳಾರಿ ಭೇಟಿ ಧಿಡೀರ್ ರದ್ದಾಗಿದೆ ಎಂದು ಆಪ್ತ ವಲಯದವರು ತಿಳಿಸಿದ್ದಾರೆ.
ಸಹೋದರ, ಆತ್ಮೀಯ ಗೆಳೆಯ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ತಾಯಿಯ ಪುಣ್ಯತಿಥಿ ಹಿನ್ನೆಲೆಯಲ್ಲಿ ಗಾಲಿ ಜನಾರ್ಧನರೆಡ್ಡಿ ಅವರು ಬಳ್ಳಾರಿಗೆ ಎರಡು ದಿನಗಳ ಕಾಲ ತೆರಳಲು ಸುಪ್ರೀಂ ಕೋರ್ಟ್‌ ನಿಂದ ಅನುಮತಿ ಪಡೆದಿದ್ದರು. ಅವರ ಅಭಿಮಾನಿಗಳು, ಕಾರ್ಯಕರ್ತರು ಸ್ವಾಗತಕ್ಕೆ‌ ಭವ್ಯ ಸಿದ್ಧತೆ ನಡೆಸಿದ್ದರು.
ಕೊರೋನಾ ಹಿನ್ನೆಲೆ ಭೇಟಿ ರದ್ದು: ಶನಿವಾರ ಸಂಜೆ ನನಗೆ ಕೊರೋನಾ ಸೊಂಕು ಇರುವುದು ದೃಡಪಟ್ಟಿರುವ ಹಿನ್ನಲೆಯಲ್ಲಿ ನಾನು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವೆ. ಈ ಹಿನ್ನೆಲೆ ನಾನು ನಾಳೆ ಆ.30 ರಂದು ಬಳ್ಳಾರಿಗೆ ಭೇಟಿ ನೀಡಿ ನನ್ನ ಪ್ರಾಣ ಸ್ನೇಹಿತ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ತಾಯಿಯವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಯಲ್ಲಿ ವೈದ್ಯರ ತಂಡ ನನಗೆ ಉತ್ತಮ ಚಿಕಿತ್ಸೆ ನೀಡುತ್ತಿದೆ. ನನಗೆ ಯಾವುದೇ ರೋಗದ ಲಕ್ಷಣಗಳು ಇಲ್ಲದಿದ್ದರೂ ಕೊರೋನಾ ಪಾಸಿಟಿವ್ ಬಂದಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ಆದಷ್ಟು ಬೇಗ ಗುಣಮುಖನಾಗಿ ಮನೆಗೆ ಮರಳಲಿದ್ದೇನೆ ಎಂದು ಮಾಜಿ‌ ಸಚಿವ, ಗಾಲಿ ಜನಾರ್ಧನ ರೆಡ್ಡಿ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!