ಹೊಸ ದಿಗಂತ, ವರದಿ ಬಳ್ಳಾರಿ:
ನಾನು ದೆಹಲಿಗೆ ಹೋಗಿರೋದು ನಿಜ, ಬಳ್ಳಾರಿಯನ್ನು ಸ್ಮಾರ್ಟ್ ಯೋಜನೆಯಡಿ ಸೇರ್ಪಡೆ ಮಾಡಬೇಕೆಂದು ಮನವಿ ಮಾಡಲು ಹೋಗಿದ್ದೇ, ಇದನ್ನೇ ಬೇರೆ ರೀತಿ ಅರ್ಥೈಸುವುದು ತಪ್ಪು, ಶ್ರೀರಾಮನ ಅನುಗ್ರಹದಿಂದ ಸಚಿವ ಸ್ಥಾನ ದೊರೆತರೇ ಸಮರ್ಥವಾಗಿ ನಿಭಾಯಿಸುವೆ ಎಂದು ನಗರ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ 2023ಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ ಸೇರ್ಪಡೆಯಾಗಲಿದ್ದು, ಬಳ್ಳಾರಿ ಅಭಿವೃದ್ಧಿ ಚಿತ್ರಣವೇ ಬದಲಾಗಲಿದೆ. ಇದರ ಜೊತೆಗೆ ಬಳ್ಳಾರಿಯ ಅಭಿವೃದ್ಧಿಗೆ ಮತ್ತು ಯುಜಿಡಿಗೆ ಬೇಕಿರೋ ಹಣ ಬಿಡುಗಡೆಗೆ ಕುರಿತು ಮನವಿ ಮಾಡಿರುವೆ. ಸಚಿವರು ಈ ಕುರಿತು ಸಕಾರಾತ್ಮಕವಾಗಿ ಭರವಸೆ ನೀಡಿದ್ದಾರೆ ಎಂದರು.
ಮುಖ್ಯಮಂತ್ರಿಯವರನ್ನು ಭೇಟಿಯಾಗಿರೋದು ನಿಜಾ, ಅವರ ಬಳಿಯೂ ಕೂಡ ಬಳ್ಳಾರಿ ನಗರದ ಯುಜಿಡಿಗಾಗಿ 220 ಕೋಟಿ ರೂ.ನೀಡುವಂತರ ಕೇಳಿದ್ದೇ, ಅವರೂ ಕೋಡುವ ಭರವಸೆ ನೀಡಿದ್ದಾರೆ.
ಶ್ರೀ ಹನುಮನ್ ದೇವರು, ಶ್ರೀರಾಮ ಹಾಗೂ ಶ್ರೀ ದುರ್ಗಮ್ಮನ ಆಶೀರ್ವಾದ ಇದ್ದರೆ ಖಂಡಿತ ಮಂತ್ರಿಯಾಗುವೆ. ಮಂತ್ರಿಯಾಗೋ ಆಸೆ ನನಗೆ ಇಲ್ಲ, ಅದಾಗೇ ಒಲಿದು ಬಂದ್ರೇ ಸಮರ್ಥವಾಗಿ ನಿಭಾಯಿಸುವೆ ಎಂದರು.