Thursday, August 11, 2022

Latest Posts

ಬಳ್ಳಾರಿಯಲ್ಲಿ ಒಂದೇ ದಿನ 480 ಕೊರೋನಾ ಸೋಂಕಿತರು ಪತ್ತೆ

ಬಳ್ಳಾರಿ: ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರಲ್ಲೂ ಬಳ್ಳಾರಿಯಲ್ಲಿ ಒಂದೇ ದಿನ 480 ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ನಿನ್ನೆ ಒಂದೇ ದಿನ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4930ಕ್ಕೆ ಏರಿಕೆಯಾಗಿದೆ.

ಒಂದೇ ದಿನ ಜಿಲ್ಲೆಯಲ್ಲಿ ಇಷ್ಟು ಪ್ರಕರಣ ದಾಖಲಾಗಲು ಕಾರಣವೇನು?. ಬಳ್ಳಾರಿ ಜಿಲ್ಲಾಡಳಿತ ಈ ಕುರಿತು ಮಾಹಿತಿ ನೀಡಿದೆ. ಹೊಸಪೇಟೆ ಮತ್ತು ಸಂಡೂರು ತಾಲೂಕುಗಳಲ್ಲಿ ಮನೆ-ಮನೆಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದೆ.

ಹೊಸಪೇಟೆ ತಾಲೂಕಿನಲ್ಲಿ ಹೆಚ್ಚು ಪ್ರಕರಣವಿರುವ ವಾರ್ಡ್‌ನಲ್ಲಿ ಉಸಿರಾಟದ ತೊಂದರೆ ಇರುವವರಿಗೆ ಕೊರೊನಾ ವೈರಸ್ ಸೋಂಕಿನ ಪರೀಕ್ಷೆ ಮಾಡಲಾಗಿದೆ. ಸಂಡೂರು ತಾಲೂಕಿನಲ್ಲಿಯೂ ಹೀಗೆ ಪರೀಕ್ಷೆ ಮಾಡಿರುವುದಕ್ಕೆ ಹೊಸ ಪ್ರಕರಣ ಹೆಚ್ಚು ದಾಖಲಾಗಿದೆ.

ಹೊಸಪೇಟೆಯಲ್ಲಿ 10,016 ಮನೆಗಳು ಮತ್ತು ಸಂಡೂರಿನಲ್ಲಿ 3128 ಮನೆಗಳಲ್ಲಿ ಪರೀಕ್ಷೆ ಮಾಡಲಾಗಿದೆ. ಇದರಿಂದಾಗಿ ಸೋಂಕಿತರನ್ನು ಮೊದಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸಹಾಯಕವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಮಂಗಳವಾರ ಬಳ್ಳಾರಿ ನಗರದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಿರುವ ಕೆಲವು ವಾರ್ಡ್‌ಗಳಲ್ಲಿ ಹೀಗೆ ಮನೆ ಮನೆ ಪರೀಕ್ಷೆ ಮಾಡಲಾಗುತ್ತದೆ. ರ‍್ಯಾಪಿಡ್ ಟೆಸ್ಟ್‌ಗಳ ಸಹಾಯದಿಂದಾಗಿ ಪ್ರಾಥಮಿಕ ಹಂತದಲ್ಲಿಯೇ ಸೋಂಕಿತರನ್ನು ಗುರುತಿಸಲು ಸಹಾಯಕವಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss