spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಳ್ಳಾರಿಯಲ್ಲಿ ಕೊರೋನಾಗೆ ಮತ್ತೆರೆಡು ಬಲಿ: ಮೃತರ ಸಂಖ್ಯೆ 7ಕ್ಕೆ ಏರಿಕೆ

- Advertisement -Nitte

ಬಳ್ಳಾರಿ: ಗಣಿ ನಾಡಿನಲ್ಲಿ ಬಳ್ಳಾರಿಯಲ್ಲಿ ಮತ್ತಿಬ್ಬರು ಹೆಮ್ಮಾರಿ ಕೊರೋನಾಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಮೃತರ ಸಂಖ್ಯೆ 7ಕ್ಕೆ ಎರಿಕೆಯಾಗಿದೆ. ನೆರೆಯ ಆಂಧ್ರ ಪ್ರದೇಶದ ರಾಯದುರ್ಗ ಮೂಲದ 28 ವರ್ಷದ ಯುವಕ ಹಾಗೂ ಜಿಂದಾಲ್‌ ಉಕ್ಕು ಕಾರ್ಖಾನೆ ಸಮೀಪದ ವಡ್ಡು ಗ್ರಾಮದ 59 ವರ್ಷದ ವೃದ್ದ ಕೊರೋನಾ ಹೆಮ್ಮಾರಿಗೆ ಬಲಿಯಾಗಿದ್ದಾರೆ. ನೆರೆಯ ಆಂದ್ರಪ್ರದೇಶದ ರಾಯದುರ್ಗ ಮೂಲದ 28 ವರ್ಷದ ಯುವಕ ಕಳೆದ ಜೂ.18ರಂದು ಬೆಂಗಳೂರು ನಗರಕ್ಕೆ ತೆರಳಿ ಬಂದಿರುವ ಟ್ರಾವೆಲ್ ಹಿಸ್ಟ್ರಿ ಇದೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ನಗರದ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಕೊವೀಡ್ ಕಂಡು ಬಂದಿದ್ದ ಹಿನ್ನೆಲೆ ಪರೀಕ್ಷೆಗೆ ಒಳಪಡಿಸಲಾಗಿತ್ತು, ವರದಿಯಲ್ಲಿ ಸೊಂಕು ಇರುವುದು ದೃಢಪಟ್ಟಿದೆ. ನಿಯಮದ ಪ್ರಕಾರ ಅಂತ್ಯಕ್ರಿಯೆ ನಡೆಯಿತು.
ತೊರಣಗಲ್ ಸಮೀಪ ವಡ್ಟು ಗ್ರಾಮದ 59 ವರ್ಷದ ಸೋಂಕಿತ ವ್ಯಕ್ತಿ ತೀವ್ರ ಉಸಿರಾಟದ ತೊಂದರೆ, ನಿಮೋನಿಯಾದಿಂದ ಬಳಲುತ್ತಿದ್ದರು. ಜೂ.20 ರಂದು ಜಿಲ್ಲಾ ಕೊವೀಡ್ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕಲ್ಪಿಸಲಾಗಿತ್ತು. ಹೃದಯಾಘಾತ ದಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ತಿಳಿಸಿದ್ದಾರೆ. ಮೃತರು ಜಿಂದಾಲ್ ಸಮೀಪದ ವಡ್ಡು ಗ್ರಾಮ ಪಂಚಾಯತಿ ಅಧ್ಯಕ್ಷೆಯ ಪತಿ ಎಂದು ಹೇಳಲಾಗುತ್ತಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss