Saturday, August 13, 2022

Latest Posts

ಬಳ್ಳಾರಿಯಲ್ಲಿ ಕೊರೋನಾ ವಾರಿಯರ್ಸ್‍ಗೆ ಕರ್ನಾಟಕ ಜನ ಸೈನ್ಯ ಸಂಘಟನೆಯಿಂದ ಸನ್ಮಾನ

ಬಳ್ಳಾರಿ: ಹೆಮ್ಮಾರಿ ಕೊರೋನಾ ಹಿನ್ನೆಲೆಯಲ್ಲಿ ಹಗಲು ರಾತ್ರಿ ಎನ್ನದೇ ಕುಟುಂಬದ ಸದಸ್ಯರನ್ನು‌ ಮರೆತು ಹೆಮ್ಮಾರಿ ನಿಯಂತ್ರಣಕ್ಕೆ ಸೇವೆ ಸಲ್ಲಿಸಿದ ಕೊರೊನಾ ವಾರಿಯರ್ಸ್‌ ಅವರನ್ನು ಗುರುತಿಸಿ ಇಲ್ಲಿನ ಕರ್ನಾಟಕ ಜನ ಸೈನ್ಯ ಸಂಘಟನೆ ಪದಾಧಿಕಾರಿಗಳು ಗುರುವಾರ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮ ಆಯೊಜಿಸಿದರೆ ಸಾಮಾಜಿಕ ಅಂತರ ಕಾಪಾಡುವುದು ಕಷ್ಟ ಎಂದು ಮನಗಂಡಿರುವ ಸಂಘಟನೆ ಪದಾಧಿಕಾರಿಗಳು ಅವರಿದ್ದ ಸ್ಥಳಕ್ಕೆ ತೆರಳಿ ಸನ್ಮಾನಿಸಿ ಗೌರವಿಸಿದರು.
ಕರ್ನಾಟಕ ಜನಸೈನ್ಯ ಸಂಘಟನೆ ರಾಜ್ಯ ಅದ್ಯಕ್ಷ ಕೆ.ಎರ್ರಿಸ್ವಾಮೀ ಮಾತನಾಡಿ, ಕಳೆದ ಮೂರು ತಿಂಗಳಿಂದ ಹೆಮ್ಮಾರಿ ಕೊರೊನಾ ನಿ ಯಂತ್ರಣಕ್ಕೆ ಮನೆ ಮಠ ಬಿಟ್ಟು ಶ್ರಮಿಸಿದ ವಾರಿಯರ್ಸ್‌ ಅವರನ್ನು ಗುರುತಿಸಿ ಸನ್ಮಾನಿಸಲಾಗಿದೆ.ಇದರಿಂದ ಅವರಿಗೆ ಇನ್ನೂ ಹೆಚ್ಚು ಉತ್ಸಾಹ ಬರಲಿದೆ. ಇದರ ಜೊತೆಗೆ ದೈರ್ಯ ಹೆಚ್ಚಲಿದೆ. ಜನಸೇವೆ ಮಾಡಿದವರನ್ನು ಪ್ರತಿಯೊಬ್ಬರೂ ಗುರುತಿಸಿ ಪ್ರೊತ್ಸಾಹಿಸಬೇಕು ಎಂದು ತಿಳಿಸಿದರು.
ಭಯಾನಕ ಹೆಮ್ಮಾರಿ ಎಂದು ತಿಳಿದಿದ್ದರೂ ವಾರಿಯರ್ಸ್‌ ಆಗಿ ಜನರ ಸೇವೆ ಹಾಗೂ ಹೆಮ್ಮಾರಿ ನಿಯಂತ್ರಣಕ್ಕೆ ಶ್ರಮಿಸಿದ್ದಾರೆ. ಮನೆ ಮಠ ಎಲ್ಲವನ್ನೂ ಬಿಟ್ಟು ನಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದಾರೆ. ಅವರನ್ನು ಗುರುತಿಸಿ ಗೌರವ ಸಮರ್ಪಿಸಿದ್ದೇವೆ. ಇಂತಹ ವಿಷಮ ಸ್ಥಿತಿಯ ವಾತಾವರಣದಲ್ಲೂ ನಮಗಾಗಿ ಸೇವೆ ಸಲ್ಲಿಸುತ್ತಿರುವ ನಿಜವಾದ ಹಿರೋಗಳು ಇವರು ಎಂದರು.
ಕೆ ಎಸ್ ಅಶೋಕ್ ಕುಮಾರ್, ಅಸುಂಡಿ ಹೊನ್ನೂರಪ್ಪ, ಎಂ.ಗೋವಿಂದರಾಜುಲು, ಬಳ್ಳಾರಿ ಶ್ರೀ ಜೈನ್ ಸಂಘ, ಕೆ ಗುರುರಾಜ್, ಎಂ ಜಿ ಕನಕ, ಎಂ.ಪ್ರಭಂಜನ್ ಕುಮಾರ್ ಸೇರಿದಂತೆ ಇತರರನ್ನು ಗುರುತಿಸಿ ಅವರಿದ್ದ ಸ್ಥಳಕ್ಕೆ ತೆರಳಿ ಸನ್ಮಾನಿಸಿ ಗೌರವಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss