Wednesday, August 10, 2022

Latest Posts

ಬಳ್ಳಾರಿಯಲ್ಲಿ ಗುಜರಾತ್ ಮೂಲದ ವ್ಯಕ್ತಿಯೊಬ್ಬನಿಗೆ ಡೆಡ್ಲಿ ಕೊರೊನಾ ದೃಢ

ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿಯಲ್ಲಿ ಗುಜರಾತ್‌ನ ಅಹಮದಾಬಾದ್ ಮೂಲದ ವ್ಯಕ್ತಿಯೊಬ್ಬರಿಗೆ ಡೆಡ್ಲಿ ಕೊರೊನಾ ದ್ರಢಪಟ್ಟಿದ್ದು, ಸೊಂಕಿತರ ಸಂಖ್ಯೆ ಜಿಲ್ಲೆಯಲ್ಲಿ 18ಕ್ಕೆ ಏರಿಕೆಯಾಗಿದೆ.

ಅಹಮದಾಬಾದ್ ನಿಂದ ಬಂದ್ ಜನರನ್ನು ಹರಪನಹಳ್ಳಿಯ ಚೆಕ್ ಪೊಸ್ಟ್ ನಲ್ಲಿ ಸಿಬ್ಬಂದಿಗಳು ತಪಾಸಣೆ ಮಾಡಿದ್ದಾರೆ. ಅವರೆಲ್ಲರನ್ನು ಒಪಿಜಿ ಸೆಂಟರ್ ನಲ್ಲಿ ಕ್ವಾರೆಂಟ್ಯನ್ ಮಾಡಲಾಗಿತ್ತು. ಸ್ವಂತ ವಾಹನದಲ್ಲಿ ಆಗಮಿಸಿದ 5 ಜನರ ಮಾದರಿ ಪಡೆದು ಪರೀಕ್ಷೆ ಕಳುಹಿಸಲಾಗಿತ್ತು. ಅದರಲ್ಲಿ 44 ವರ್ಷದ ಒಬ್ಬ ವ್ಯಕ್ತಿಗೆ ಸೊಂಕು ದ್ರಢಪಟ್ಟಿದೆ. ಸೊಂಕಿತರನ್ನು ಜಿಲ್ಲಾ‌ ಕೊವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಉಳಿದವರ ಬಗ್ಗೆ ನಿಗಾ ಇಡಲಾಗಿದೆ. ತಬ್ಲಿಗಿ ನಂಜು ಆಯ್ತು, ಮಹಾರಾಷ್ಟ್ರದ ‌ಲಿಂಕ್ ಆಯ್ತು, ಮುಂಬೈ ಪ್ರಯಾಣಿಕರ ನಂಟು ರಾಜ್ಯಾದ್ಯಂತ ಕಿಲ್ಲರ್ ಕೊರೊನಾ ಅಭಟಿಸುತ್ತಿದೆ. ಜಿಲ್ಲೆಯಲ್ಲಿ ಗುಜರಾತ್‌ನ ಅಹಮದಾಬಾದ್ ನ ನಂಜು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

ಆದರೆ, ಹರಪನಹಳ್ಳಿ ಯಲ್ಲಿ ಯಾವುದೇ ನಿಷೇಧ ವಲಯಗಳಲ್ಲ. ಜಿಲ್ಲೆಯಲ್ಲಿ ಇಲ್ಲಿವರೆಗೆ ಪತ್ತೆಯಾದ 18 ಸೊಂಕಿತ ಪ್ರಕರಣಗಳಲ್ಲಿ 13 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 5 ಜನರು ನಗರದ ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss