ಬಳ್ಳಾರಿ:ಸೋಮಶೇಕರ್ ರೆಡ್ಡಿ ಮನೆಯ ಮುಂದೆ ದರಣಿ ನಡೆಸಲು ಮುಂದಾದ ಜಮೀರ್ ಅಹಮದ್ ಖಾನ್ ರನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲವುದಿನಗಳಿಂದ ನಡೆಯುತ್ತಿದ್ದ ಜಮೀರ್ ಹಾಗೂ ಸೋಮಶೇಖರ್ ರೆಡ್ಡಿಯ ಮಾತಿನ ಚಕಮಕಿಗೆ ಪೊಲೀಸ್ ತೆರೆ ಎಳೆದಿದ್ದಾರೆ. ಸಿಎಎ ಪರವಾಗಿ ಪ್ರತಿಭಟನೆ ಮಾಡುತ್ತಿದ್ದ ಸೋಮಶೇಖರ್ ರೆಡ್ಡಿಯ ಮಾತುಗಳಿಗೆ ಕೆಂಡಕಾರಿದ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್, ಸೋಮಶೇಖರ್ ರೆಡ್ಡಿಯನ್ನು ತರಾಟಗೆ ತೆಗೆದುಕೊಂಡರು.
ಸೋಮಶೇಖರ್ ರೆಡ್ಡಿಯನ್ನು ಬಂಧಿಸುವಂತೆ ಸರ್ಕಾರಕ್ಕೆ ಜಮೀರ್ ಅಹಮದ್ ಮನವಿ ಮಾಡಿಕೊಂಡಿದ್ದರು, ಆದರೆ ಸರ್ಕಾರ ಸೋಮಶೇಖರ್ ರೆಡ್ಡಿಯನ್ನು ಬಂಧಿಸಿಲ್ಲವೆಂದು ಗುಡುಗಿದರು.
ಇಂದು ಜಮೀರ್ ಅಹಮದ್ ಖಾನ್ ಮತ್ತು ಅವರ ಬೆಂಬಲಿಗರು ಸೋಮಶೇಖರ್ ರೆಡ್ಡಿ ಮನೆ ಮುಂದೆ ಪ್ರತಿಭಟನೆ ಮಾಡಲು ಮುಂದಾಗಿದ್ದರು. ಸೋಮಶೇಖರ್ ಮನೆಗೆ ಹೊರಟಿದ್ದ ಜಮೀರ್ ಮತ್ತು ಬೆಂಬಲಿಗರನ್ನು ಪೊಲೀಸರು ಕಂಟ್ರಿ ಕ್ಲಬ್ ಬಳಿ ಬಂಧಿಸಿದ್ದಾರೆ.