ಬಳ್ಳಾರಿ: ನಗರದ ವ್ಯಕ್ತಿಯೊಬ್ಬರಿಗೆ ಮಹಾ ಹೆಮ್ಮಾರಿ ಕೊರೋನಾ ಸೊಂಕು ವಕ್ಕರಿಸಿದ್ದು ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ.
ಬುಧವಾರ ರಾತ್ರಿ ಸೊಂಕಿತ ವ್ಯಕ್ತಿಯನ್ನು ಕೊವೀಡ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸೊಂಕಿತ ವ್ಯಕ್ತಿ ಜಿಂದಾಲ್ ಕಂಪನಿ ಉದ್ಯೋಗಿಯಾಗಿದ್ದು, ಅವರ ತಾಯಿಯೊಂದಿಗೆ ತಮಿಳುನಾಡಿಗೆ ತೆರಳಿದ್ದರು, ವಾಪಾಸ್ಸಾದ ಬಳಿಕ ಪರೀಕ್ಷೆಯಲ್ಲಿ ಸೊಂಕು ಇರುವುದು ದ್ರಢಪಟ್ಟಿದೆ. ಅಲ್ಲಿ ಅವರ ತಾಯಿಗೂ ಸೊಂಕು ವಕ್ಕರಿಸಿದೆ.
ಸೊಂಕಿತ ವ್ಯಕ್ತಿ ಇದಕ್ಕೂ ಮುನ್ನ ಜಿಂದಾಲ್ ಕಂಪನಿಯಲ್ಲಿ ಕೆಲಸ ನಿರ್ವಹಿಸಿದ್ದರು. ಈ ಹಿನ್ನೆಲೆ ಅವರು ವಾಸವಾಗಿದ್ದ ಜಿಂದಾಲ್ ಕಂಪನಿಯ ವಸತಿ ಗ್ರಹ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಇದು ಇಡೀ ಜಿಂದಾಲ್ ಕಂಪನಿ ಉದ್ಯೊಗಿಗಳನ್ನು ನಿದ್ರೆಗೆಡಿಸಿದೆ. ವ್ಯಕ್ತಿ ಜೊತೆ ಯಾರು ಸಂಪರ್ಕ ಹೊಂದಿದ್ದರು. ಎಲ್ಲೆಲ್ಲಿ ಓಡಾಡಿದ್ದರು ಎನ್ನುವ ಕುರಿತು ಮಾಹಿತಿ ಕಲೆ ಹಾಕಲಾಗುತ್ತದೆ.