Tuesday, August 16, 2022

Latest Posts

ಬಳ್ಳಾರಿಯಲ್ಲಿ ನಿಧಿ ಸಮರ್ಪಣಾ ಮಹಾ ಅಭಿಯಾನಕ್ಕೆ ಚಾಲನೆ

ಹೊಸ ದಿಗಂತ ವರದಿ,ಬಳ್ಳಾರಿ:

ಜಿಲ್ಲೆಯ ಕಮಲಾಪುರ ಪಟ್ಟಣದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಮಹಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು, ನೆರೆದ ಎಲ್ಲ ಗಣ್ಯರು ಶ್ರೀರಾಮನ ಭಾವಚಿತ್ರಕ್ಕೆ ಪುಷ್ಟಾರ್ಚನೆ ಸಲ್ಲಿಸುವ ಮೂಲಕ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿದರು. ಈ
ಅಭಿಯಾನ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಳ್ಳಾರಿ ವಿಭಾಗ ಕಾರ್ಯವಾಹ ಕೇಶವ ಜಿ.ಮಾತನಾಡಿದರು. ಹಿಂದು ಜಾಗರಣ ವೇದಿಕೆಯ ವಿಭಾಗ ಪ್ರಧಾನ ಕಾರ್ಯದರ್ಶಿ ಮೌನೇಶ್ ಬಡಿಗೇರ, ನಗರದ ಗಣ್ಯರಾದ ಸೈಯದ್ ಸಮೀವುಲ್ಲಾ, ನಾಗಯ್ಯ, ಗೋಪಾಲ ಸೇರಿದಂತೆ ಬಹುತೇಕ ಎಲ್ಲ ಸಮಾಜದ‌ ಮುಖಂಡರು, ಭಾಜಪ ಮುಂಖಡರು, ಮಾತೆಯರು, ಸಜ್ಜನ ಸಮಾಜ ಬಂಧುಗಳು ಮತ್ತು ಸ್ವಯಂ ಸೇವಕರು, ಶ್ರೀರಾಮ ಭಕ್ತರು ಈ ಮಹಾ ಅಭಿಯಾನದಲ್ಲಿ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss