ಬಳ್ಳಾರಿ: ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸೋಂಕು ಪರೀಕ್ಷೆ ನಡೆಸುವ ಅನುಮತಿಯನ್ನು ಖಾಸಗಿ ಪ್ರಯೋಗಾಲಯಕ್ಕೂ ನೀಡಲಾಗಿದೆ.ಸರ್ಕಾರಿ ಹೊರತುಪಡಿಸಿ ಖಾಸಗಿ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲು ಕೇಂದ್ರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಎನ್ ಎಬಿಎಲ್(ನ್ಯಾಷನಲ್ ಎಕ್ರಡೇಷನ್ ಬೋರ್ಡ್ ಫಾರ್ ಟೆಸ್ಟಿಂಗ್ ಆಯಂಡ್ ಕ್ಯಾಲಿಬ್ರೇಷನ್ ಲ್ಯಾಬೋರೇಟರಿಸ್) ಖಾಸಗಿ ಲ್ಯಾಬೋರೇಟರಿಗಳು ಕೋವಿಡ್ 19 ಮಾದರಿಯ ಪರೀಕ್ಷೆಯನ್ನು ನಡೆಸಲು ಅನುಮತಿ ನೀಡಲಾಗಿದೆ.ಈ ನಿಟ್ಟಿನಲ್ಲಿ ಬಳ್ಳಾರಿಯಲ್ಲಿ ಇಂದು ಸಂಜೀವಿನಿ ಡಯಾಗ್ನಾಸ್ಟಿಕ ಸೆಂಟರ್ ಗೆ ನಗರ ಶಾಸಕ ಸೋಮಶೇಖರ್ ರೆಡ್ಡಿ ಅವರು ಚಾಲನೆ ನೀಡಿದರು.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ದೇಶದಲ್ಲಿರುವ ಎಲ್ಲ ಖಾಸಗಿ ಕೊರೊನಾ ಸೋಂಕು ಪರೀಕ್ಷಾ ಕೇಂದ್ರಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.ಅದೇ ನಿಟ್ಟಿನಲ್ಲಿ ಪರೀಕ್ಷಾ ಶುಲ್ಕ ೪೦೦೦ ನಿಗದಿ ಮಾಡಲಾಗಿದೆ. ಶ್ವಾಸ ಸಂಬಂಧಿ ಸಮಸ್ಯೆ, ಉಸಿರಾಟದ ತೊಂದರೆ, ಜ್ವರ, ಕೆಮ್ಮಿನಿಂದಾಗಿ ಆಸ್ಪತ್ರೆಗೆ ದಾಖಲಾದ ಎಲ್ಲಾ ರೋಗಿಗಳಿಗೆ ಕೊರೊನಾ ವೈರಸ್ (ಕೋವಿಡ್ -19) ರೋಗ ನಿರ್ಧರಣಾ ಪರೀಕ್ಷೆ ನಡೆಸಬೇಕು.ಅನ್ನೋ ಸರ್ಕಾರದ ನಿಯಮದಂತೆ ಡಾಕ್ಟರ್ ಚೀಟಿಯನ್ನು ಪಡೆದು ಹಾಗೂ ರೋಗಿಗಳ ಆಧಾರ ಕಾರ್ಡ ಪಡೆದು ತಪಾಸಣೆ ಮಾಡಲಾಗುತ್ತದೆ.ಕೇವಲ ಒಂದೇ ದಿನದಲ್ಲಿ ಇಲ್ಲಿ ಫಲಿತಾಂಶ ನೀಡಲಾಗುತ್ತದೆ. ಬೆಂಗಳೂರು ಹೊರತುಪಡಿಸಿ ಬಳ್ಳಾರಿಯಲ್ಲಿ ಮೊದಲ ಖಾಸಗಿ ಲ್ಯಾಬೋರೇಟರಿ ಇದಾಗಿದೆ.
ಮೋತ್ಕರ್ ಶ್ರೀನಿವಾಸ. ವೀರಶೇಖರರೆಡ್ಡಿ.ಮಲ್ಲನಗೌಡ.ಮರ್ಚಡ್ ಮಲ್ಲಿಕಾರ್ಜುನ ಗೌಡ.ಶ್ರವಣರೆಡ್ಡಿ.ವೇಣುಗೋಪಾಲ ಗುಪ್ತಾ.ಜೀತೇಂದ್ರ ಪ್ರಸಾದ್ ಸರ್ವಶೆಟ್ಟಿ.ತಲ್ಲಂ ಕಿಶೋರ್.ಮಾರುತಿ ಸರ್ವಶೆಟ್ಟಿ.ರಾಜಶೇಖರ ಮಲಾಲಿ.ಸೇರಿದಂತೆ ಹಲವರು ಭಾಗಿಯಾಗಿದ್ದರು.