ಬಳ್ಳಾರಿ: ಜಿಲ್ಲೆಯಲ್ಲಿ ಮತ್ತೆ ಮೂವರಿಗೆ ಮಹಾಮಾರಿ ಕೊರೊನಾ ವಕ್ಕರಿಸಿದ್ದು, ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕೊಗಳಿ ಗ್ರಾಮದ 60 ವರ್ಷದ ಮಹಿಳೆಗೆ ಸೊಂಕು ಇರುವುದು ದೃಢಪಟ್ಟಿದೆ. ಉಳಿದ ಎರಡು ಪ್ರಕರಣಗಳು ಉಕ್ಕಿನ ನಗರಿ ತೊರಣಗಲ್ ಜಿಂದಾಲ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೌಕರರಲ್ಲಿ ಕಾಣಿಸಿಕೊಂಡ ಹೆಮ್ಮಾರಿ ವಕ್ಕರಿಸಿದೆ. ಈ ಮೊದಲು ದೃಢಪಟ್ಟ ಸೊಂಕಿತರೋಂದಿಗೆ ಎರಡನೇ ಸಂಪರ್ಕ ಹೊಂದಿದ್ದಾರೆ. ಕಂಪನಿಯಲ್ಲಿ ಪತ್ತೆಯಾದ ಬೆನ್ನಲ್ಲೇ ಇಬರನ್ನು ಕ್ವಾರೆಂಟ್ಯನ್ ಮಾಡಲಾಗಿತ್ತು. ವರದಿಯಲ್ಲಿ ಇಬ್ಬರಿಗೆ ಸೊಂಕು ಇರುವುದು ದೃಢಪಟ್ಟಿದೆ. ಮೂವರನ್ನು ನಗರದ ಜಿಲ್ಲಾ ಕೊವೀಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಂದಾಲ್ ಕಾರ್ಖಾನೆಯಲ್ಲಿ ಸೊಂಕಿತರ ಸಂಖ್ಯೆ ದಿನದಂದ ದಿನಕ್ಕೆ ಏರಿಕೆಯಾಗುತ್ತಿದ್ದು, ನೌಕರರಲ್ಲಿ ಭೀತಿ ಶುರುವಾಗಿದೆ. ನಗರದಲ್ಲಿ ಜಿಂದಾಲ್ ನೌಕರರು ಹೆಚ್ಚಿದ್ದು, ಸಹಜವಾಗಿ ನಗರದ ನಾಗರಿಕರಲ್ಲೂ ಆತಂಕ ಮನೆ ಮಾಡಿದೆ. ಇದೇ ರೀತಿ ಸೊಂಕಿತರ ಸಂಖ್ಯೆ ಹೆಚ್ಚಳವಾದರೆ ಮೈಸೂರಿನ ಜುಬಿಲೆಂಟ್ ಮಾದರಿಯಲ್ಲೇ ಇಡೀ ಕಂಪನಿ ಸೀಲ್ ಡೌನ್ ಮಾಡಿದರೂ ಅಚ್ಚರಿ ಇಲ್ಲ. ಆದರೇ, ಜಿಲ್ಲಾಡಳಿತ ಈ ಕುರಿತು ಯಾವುದೇ ನಿರ್ಧಾರ ತೆಗೆದು ಕೊಂಡಿಲ್ಲ.