Wednesday, June 29, 2022

Latest Posts

ಬಳ್ಳಾರಿಯಲ್ಲಿ ಮತ್ತೆ ಹೆಮ್ಮಾರಿ: 9 ಜನರಿಗೆ ಕೊರೋನಾ ಧೃಡ, ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 47 ಕ್ಕೆ ಏರಿಕೆ

ಬಳ್ಳಾರಿ: ಮಹಾ ಹೆಮ್ಮಾರಿ ಕೊರೋನಾ ಜಿಲ್ಲೆಯಲ್ಲಿ ೯ ಜನರಿಗೆ ವಕ್ಕರಿಸಿದ್ದು, ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ೪೭ ಕ್ಕೆ ಎರಿಕೆಯಾಗಿದೆ. ಇಲ್ಲಿವರೆಗೆ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರು ೨೭ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಬ್ಬ ವ್ರದ್ದ ಮ್ರತಪಟ್ಟಿದ್ದು, ೧೯ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಪತ್ತೆಯಾದ ೯ ಜನರಲ್ಲಿ ೭ ಜನರು ರಾಜಸ್ಥಾನ್ ನಿಂದ ಆಗಮಿಸಿದ್ದಾರೆ. ಮಹಾರಾಷ್ಟ್ರ ಹಾಗೂ ಗುಜರಾತ್ ನಿಂದ ತಲಾ ಒಬ್ಬರು ಮರಳಿದ್ದಾರೆ. ಎಲ್ಲರನ್ನೂ ಕ್ವಾರೆಂಟ್ಯನ್ ಮಾಡಿ ಗಂಟಲು ದ್ರವದ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ೯ ಜನರಿಗೆ ಸೊಂಕು ಇರುವುದು ದ್ರಢಪಟ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss