Thursday, August 11, 2022

Latest Posts

ಬಳ್ಳಾರಿಯಲ್ಲಿ ಮತ್ತೆ 30 ಜನರಿಗೆ ಕೊರೋನಾ ದೃಢ , ಸೋಂಕಿತರ ಸಂಖ್ಯೆ 250 ಕ್ಕೆ ಏರಿಕೆ

ಬಳ್ಳಾರಿ: ಜಿಲ್ಲೆಯಲ್ಲಿ ಹೆಮ್ಮಾರಿ ಕೊರೊನಾ ರುದ್ರನರ್ತನ ಮುಂದುವರೆದಿದ್ದು, ಮಂಗಳವಾರ ಬರೋಬ್ಬರಿ 30 ಜನರಿಗೆ ವಕ್ಕರಿಸಿದ್ದು, ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 250 ಕ್ಕೆ ಏರಿಕೆಯಾಗಿದೆ. ದಿನದಿಂದ ದಿನಕ್ಕೆ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜಿಲ್ಲಾಡಳಿಕ್ಕೆ ಚಿಕಿತ್ಸೆ ಕಲ್ಪಿಸುವುದೇ ಬಹು ದೊಡ್ಡ ಸವಾಲಾಗಿ‌ ಪರಿಣಮಿಸಿದೆ. ಜಿಲ್ಲೆಯ ಸಿರುಗುಪ್ಪದಲ್ಲಿ ಒಬ್ಬರಿಗೆ, ಹಗರಿಬೊಮ್ಮನಹಳ್ಳಿಯಲ್ಲಿ 5, ಬಳ್ಳಾರಿಯಲ್ಲಿ 10, ಸಂಡೂರು ತಾಲ್ಲೂಕಿನಲ್ಲಿ 9, ಹೊಸಪೇಟೆ ಯಲ್ಲಿ ಇಬ್ಬರು, ಕೂಡ್ಲಗಿಯಲ್ಲಿ ಒಬ್ಬರಿಗೆ ಹೆಮ್ಮಾರಿ ವಕ್ಕರಿಸದೆ. ಎಲ್ಲರನ್ನೂ ತೊರಣಗಲ್ ಸಂಜೀವಿನಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಲ್ಲಿವರೆಗೆ ಪತ್ತೆಯಾದ 250 ಪ್ರಕರಣಗಳಲ್ಲಿ, ಒಬ್ಬರು ಮೃತಪಟ್ಟಿದ್ದು, 55 ಜನ ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ 194 ಜನ ಸೊಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ೩೫ ಸೊಂಕಿತರು ರೊಗ ಲಕ್ಷಣಗಳನ್ನು ಹೊಂದಿದ್ದು, 159 ಜನ ಸೊಂಕಿತರಿಗೆ ಹೆಮ್ಮಾರಿ ಕೊರೋನಾ ಲಕ್ಣಣಗಳಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss