ಬಳ್ಳಾರಿ: ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಮಳೆಗೆ 140 ಮನೆಗಳು ಕುಸಿದಿದ್ದು, 200 ಕ್ಕೂ ಹೆಚ್ಚು ಹೆಕ್ಟೇರ ಪ್ರದೇಶದಲ್ಲಿ ಭತ್ತ ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿವೆ.
ಜಿಲ್ಲೆಯ ಸಂಡೂರು ತಾಲೂಕಿನಲ್ಲಿ 2, ಹರೊಮಹಳ್ಳಿ ತಾಲೂಕಿನಲ್ಲಿ 1 ಮನೆ ಸಂಪೂರ್ಣ ಕುಸಿದಿದೆ. ಬಳ್ಳಾರಿ ತಾಲೂಕಿನ ಮೀನಳ್ಳಿಯಲ್ಲಿ 1, ಕುಡುತಿನಿ ಪಟ್ಟಣದಲ್ಲಿ 6 ಮನೆಗಳು ಮಳೆ ಹೊಡೆತಕ್ಕೆ ಬಿದ್ದಿವೆ. ಸಿರುಗುಪ್ಪ ತಾಲೂಕಿನಲ್ಲಿ 2, ಸಂಡೂರು ತಾಲ್ಲೂಕಿನಲ್ಲಿ 22, ಕುರಗೋಡುನಲ್ಲಿ 1, ಹೋಸ ಪೇಟೆ ಯಲ್ಲಿ 16, ಕಂಪ್ಲಿಯಲ್ಲಿ 3, ಹಗರಿಬೊಮ್ಮನಹಳ್ಳಿಯಲ್ಲಿ 26, ಕೂಡ್ಲಗಿ 9, ಕೊಟ್ಟೂರು 16, ಹರಪನಹಳ್ಳಿ 20, ಹಡಗಲಿಯಲ್ಲಿ 18 ಸೇರಿದಂತೆ ಜಿಲ್ಲೆಯಲ್ಲಿ 140ಕ್ಕೂ ಹೆಚ್ಚು ಮನೆಗಳು ಬಿದ್ದಿವೆ.
200 ಹೆಕ್ಟೇರ್ ಬೆಳೆನಾಶ: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಸುರಿದ ಮಳೆಗೆ 198.5 ಹೆಕ್ಟೇರ್ ಪ್ರದೇಶದ ನಾನಾ ಬೆಳೆಗಳು ನಾಶವಾಗಿದ್ದು, 12.26 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಸಿರುಗುಪ್ಪ ತಾಲೂಕಿನ ತೆಕ್ಕಲಕೊಟೆ ಹಾಗೂ ಅಚ್ಚೋಳ್ಳಿ ಪ್ರದೇಶದಲ್ಲಿ 140 ಹೆಕ್ಟೇರ್ ಭತ್ತದ ಬೆಳೆ ಸಂಪೂರ್ಣ ನೆಕಚ್ಚಿದೆ. ಸಂಡೂರು ತಾಲೂಕಿನ 10 ಹೆಕ್ಟೇರ್, ಹೊಸಪೇಟೆ ತಾಲೂಕಿನಲ್ಲಿ 25 ಹೆಕ್ಟೇರ್, ಕೂಡ್ಲಗಿಯಲ್ಲಿ 1.5 ಹಾಗೂ ಹರಪನಹಳ್ಳಿಯಲ್ಲಿ 20 ಹೆಕ್ಟೇರ್ ಪ್ರದೇಶದಲ್ಲಿ ನಾನಾ ಬೆಳೆಗಳು ಜಲಾವೃತವಾಗಿವೆ. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಸುರಿದ ಮಳೆಗೆ 12.26 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆಗಳು ನಾಶವಾಗಿವೆ. ತಾಲುಕಿನ ಬನ್ನಿಗೋಳ, ವ್ಯಾಸಪುರ, ಶಿಗ್ಗೇನಹಳ್ಳಿ, ವಾರಡಾ ಸೇರಿದಂತೆ ನಾನಾ ಕಡೆ ಪಪ್ಪಾಯ, ದಾಳಿಂಬೆ ಸೇರಿದಂತೆ ನಾನಾ ಬೆಳೆಗಳು ಹಾನೀಗೀಡಾಗಿವೆ. ಮಂಗಳವಾರ ಜಿಲ್ಲೆಯಲ್ಲಿ ಬೆಳಿಗ್ಗೆ ವರುಣ ಕೆಲ ನಿಮಿಷಗಳ ಕಾಲ ಅರ್ಭಟಿಸಿ ನಂತರ ಬಿಡುವು ನೀಡಿದ್ದಾನೆ.