ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಹೆಮ್ಮಾರಿ ಕೊರೋನಾ ೧೫ ಜನರಿಗೆ ವಕ್ಕರಿಸಿದ್ದು, ಸೋಂಕಿತರ ಸಂಖ್ಯೆ ೧೯೬ ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಸಂಡೂರು, ಹೊಸಪೇಟೆ, ಕೂಡ್ಲಿಗಿ ಹಾಗೂ ಬಳ್ಳಾರಿ ನಗರದಲ್ಲಿ ೧೫ ಪ್ರಕರಣಗಳು ಪತ್ತೆಯಾಗಿವೆ. ೧೫ ಜನರಲ್ಲಿ ೧೦ ಪ್ರಕರಣಗಳು ಜಿಂದಾಲ್ ಉಕ್ಕು ಕಾರ್ಖಾನೆ ನೌಕರರಾಗಿದ್ದು ಅವರನ್ನು ತೊರಣಗಲ್ ಸಂಜೀವಿನಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಉಳಿದ ಐವರನ್ನು ನಗರದ ಜಿಲ್ಲಾ ಕೊವೀಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಇಲ್ಲಿವರೆಗೂ ಪತ್ತೆಯಾದ ೧೯೬ ಪ್ರಕರಣಗಳಲ್ಲಿ ೫೫ ಜನ ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಬ್ಬ ವೃದ್ದ ಮೃತಪಟ್ಟಿದ್ದು, ೧೩೭ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.