Tuesday, August 16, 2022

Latest Posts

ಬಳ್ಳಾರಿಯಲ್ಲಿ 298 ಜನರಿಗೆ ಸೋಂಕು ದೃಢ, 175 ಜನ ಸೋಂಕಿತರು ಗುಣಮುಖ 

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಭಾನುವಾರ 298 ಜನರಿಗೆ ಮಹಾಮಾರಿ ವಕ್ಕರಿಸಿರುವುದು ದೃಡಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 29,083 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ನಾನಾ ಕಡೆ ಪತ್ತೆಯಾದ ಪ್ರಕರಣಗಳಲ್ಲಿ 175 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಇಲ್ಲಿವರೆಗೆ ಗುಣಮುಖರಾಗಿ 23,707 ಜನರು ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ. 8 ಜನ ಸೋಂಕಿತರು ಇಂದು ನೋವೆಲ್ ಕೊರೋನಾಗೆ ಬಲಿಯಾಗಿದ್ದು, ಇಲ್ಲಿವರೆಗೆ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 400 ಕ್ಕೆ ಏರಿಕೆಯಾಗಿದೆ. 4976 ಸೋಂಕಿತ ಪ್ರಕರಣಗಳು ಜಿಲ್ಲೆಯಲ್ಲಿ ಸಕ್ರೀಯವಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss