Tuesday, July 5, 2022

Latest Posts

ಬಳ್ಳಾರಿಯಿಂದ ಗೋವಾಕ್ಕೆ ಸಾರಿಗೆ ಬಸ್ ಸಂಚಾರ ಪ್ರಾರಂಭ

ಬಳ್ಳಾರಿ: ನೋವೆಲ್ ಕೊರೋನಾ ಹಿನ್ನಲೆಯಲ್ಲಿ ಈಕರಸಾ ಸಂಸ್ಥೆಯ ಬಳ್ಳಾರಿ ವಿಭಾಗದಿಂದ ಗೋವಾ ರಾಜ್ಯಕ್ಕೆ ಸಂಚರಿಸುತ್ತಿದ್ದ ಸಂಸ್ಥೆಯ ಬಸ್ಸುಗಳನ್ನು ಸ್ಥಗಿತಗೊಳಿಸಲಾಗಿತ್ತು.

ಈಗ ಮತ್ತೇ ಪ್ರಾರಂಭಿಸಲಾಗಿದೆ. ಬಳ್ಳಾರಿ-ಪಣಜಿ (ಗೋವಾ) ಮಾರ್ಗದಲ್ಲಿ ಅಂತರ್‍ರಾಜ್ಯ ಸಾರಿಗೆಯನ್ನು ಪ್ರಾರಂಭಿಸಲಾಗಿದೆ ಎಂದು ಈಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಶಂಭೂಕಾರ್ ರಾಮರಾವ್ ಚಂದ್ರಶೇಖರ್ ಅವರು ತಿಳಿಸಿದ್ದಾರೆ.

ಬಳ್ಳಾರಿ-ಪಣಜಿ ವಯಾ ಹೊಸಪೇಟೆ, ಹುಬ್ಬಳ್ಳಿ ಮಾರ್ಗವಾಗಿ ಹೊರಡುವ ಬಸ್‌ಗಳು ಬಳ್ಳಾರಿ ವಿಭಾಗದಿಂದ ಬಿಡುವ ವೇಳೆ ಸಂಜೆ 5.30ಕ್ಕೆ ಹಾಗೂ ರಾತ್ರಿ 9ಕ್ಕೆ ಹೊರಡಲಿದ್ದು, ಸಾರ್ವಜನಿಕರು ಮುಂಗಡ ಆಸನಗಳನ್ನು ಕಾಯ್ದಿರಿಸಬಹುದು ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss