spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಳ್ಳಾರಿಯ ಜಿಂದಾಲ್ ನಲ್ಲಿ ಮತ್ತೆ ಕೊರೋನಾ ಮಹಾಸ್ಫೋಟ, ಬರೋಬ್ಬರಿ 97 ಜನರಿಗೆ ಸೋಂಕು ದೃಢ

- Advertisement -Nitte

ಬಳ್ಳಾರಿ: ಜಿಲ್ಲೆಯಲ್ಲಿ ಹೆಮ್ಮಾರಿ ಪ್ರತಾಪ ಮುಂದುವರೆದಿದ್ದು, ಬರೋಬ್ಬರಿ 97 ಜನರಿಗೆ ವಕ್ಕರಿಸುರುವುದು ದೃಡಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಹೆಮ್ಮಾರಿ ಕೊರೋನಾ ಸೊಂಕಿತರ ಸಂಖ್ಯೆ 224ಕ್ಕೆ ಏರಿಕೆಯಾಗಿದೆ. 97 ಪ್ರಕರಣಗಳಲ್ಲಿ ಇಬ್ಬರು ಪುರುಷರಿದ್ದು, ಉಳಿದ 95 ಪ್ರಕರಣಗಳು ಜಿಲ್ಲೆಯ ಜಿಂದಾಲ್ ಕಂಪನಿಗೆ ಸಂಬಂಧಿಸಿದವರು ಎಂದು ವರದಿಯಲ್ಲಿ ದೃಡಪಟ್ಟಿದೆ. ನಗರದ ಅಹಂಬಾವಿ ಪ್ರದೇಶದ ಹಾಗೂ ಹೊಸಪೇಟೆ ನಗರದ ಈಶ್ವರ ಬಡಾವಣೆಯ ನಿವಾಸಿ ಸೇರಿ ಇಬ್ಬರು ಹೊರತು ಪಡಿಸಿ ಉಳಿದ 95 ಪ್ರಕರಣಗಳು ಜಿಂದಾಲ್ ಕಂಪನಿ ನೌಕರರು ಹಾಗೂ ಅವರ ಸಂಬಂಧಿಕರಾಗಿದ್ದಾರೆ. ಎಲ್ಲರನ್ನೂ ತೊರಣಗಲ್ ಜಿಂದಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇಲ್ಲಿವರೆಗೂ ಸುಮಾರು ಸಾವಿರಕ್ಕೂ ಹೆಚ್ಚು ಜನರನ್ನು ಕ್ವಾರೆಂಟೈನ್ ಮಾಡಲಾಗಿದೆ. ಗುರುವಾರ 53 ಪ್ರಕರಣಗಳು ಜಿಂದಾಲ್ ನಲ್ಲಿ ಪತ್ತೆಯಾಗಿದ್ದವು. ಒಟ್ಟು ಸಂಖ್ಯೆ 83ರ ಗಡಿ ತಲುಪಿತ್ತು. ಶುಕ್ರವಾರ ಮತ್ತೆ ಸಂಖ್ಯೆ ಸ್ಪೋಟಗೊಂಡಿದ್ದು, ಬರೋಬ್ಬರಿ 95 ಜನರಿಗೆ ಹೆಮ್ಮಾರಿ ವಕ್ಕರಿಸಿರುವುದು ವರದಿಯಲ್ಲಿ ದೃಢಪಟ್ಟಿದೆ. ಜಿಂದಾಲ್‌ ನಲ್ಲಿ ಸೊಂಕಿತರ ಸಂಖ್ಯೆ 178 ಕ್ಕೆ ತಲುಪಿದಂತಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss