ಬಳ್ಳಾರಿ: ಗಣಿ ನಾಡು ಬಳ್ಳಾರಿ ಜಿಲ್ಲೆಯ ಜಿಂದಾಲ್ ನಲ್ಲಿ ಮತ್ತೆ 5 ಜನರಿಗೆ ಮಹಾ ಹೆಮ್ಮಾರಿ ಕೊರೋನಾ ವಕ್ಕರಿಸಿದ್ದು, ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಪ್ರತಿಷ್ಠಿತ ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ೪ ಜನರಿಗೆ ಸೋಂಕು ಇರುವುದು ದೃಡ ಪಟ್ಟಿದೆ. ಇತ್ತೀಚೆಗೆ ಪತ್ತೆಯಾದ ಸೊಂಕಿತರ ಮೊದಲ ಸಂಪರ್ಕ ಹೊಂದಿದ ನಾಲ್ಕು ಜನರಿಗೆ ಹೆಮ್ಮಾರಿ ವಕ್ಕರಿಸಿದೆ. ಇದರ ಜೊತೆಗೆ ಆರೊಗ್ಯ ಸಹಾಯಕಿಯೊಬ್ಬರಿಗೆ ಸೊಂಕು ಇರುವುದು ದೃಢಪಟ್ಟಿದ್ದು, 5 ಜನರನ್ನೂ ನಗರದ ಜಿಲ್ಲಾ ಕೊವೀಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೈಸೂರು ಜುಬಿಲೆಂಟ್ ಮಾದರಿಯಲ್ಲಿ ಜಿಂದಾಲ್ ಕಾರ್ಖಾನೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ನೌಕರರಲ್ಲಿ ಹಾಗೂ ಕಾರ್ಮಿಕರಲ್ಲಿ ಆತಂಕ ಮನೆ ಮಾಡಿದೆ. ಕಂಪನಿಯ ಉದ್ಯೋಗಿಗಳು ಹೊಸಪೇಟೆ, ಸಂಡೂರು, ಬಳ್ಳಾರಿ, ಕಂಪ್ಲಿ ಸೇರಿದಂತೆ ನಾನಾ ಕಡೆ ವಾಸವಾಗಿದ್ದು, ಪ್ರದೇಶದ ವ್ಯಾಪ್ತಿಯ ನಾಗರಿಕರಿಗೆ ಹೆಮ್ಮಾರಿ ಭೀತಿ ಶುರುವಾಗಿದೆ. ಮಂಗಳವಾರ ಪತ್ತೆಯಾಗಿದ್ದ ಮೂರು ಪ್ರಕರಣಗಳಲ್ಲಿ ಜಿಂದಾಲ್ ಇಬ್ಬರು ನಗರದ ಅಹಂಬಾವಿ ಪ್ರದೇಶ, ಇನ್ನೊಬ್ಬರು ಎಂ.ಕೆ.ನಗರ ಬಡಾವಣೆಯಲ್ಲಿ ವಾಸವಾಗಿದ್ದು, ಈ ಪ್ರದೇಶದ ಜನರಿಗೆ ಕೊರೋನಾ ಭೀತಿ ಶರುವಾಗಿದೆ. ಇದರ ಬೆನ್ನಲ್ಲೆ ಮತ್ತೆ ಇಂದು ನಾಲ್ಕು ಜನರಿಗೆ ವಕ್ಕರಿಸಿದ್ದು ಇಡೀ ಕಂಪನಿಯ ನೌಕರರಲ್ಲಿ ಆತಂಕ ಮನೆ ಮಾಡಿದೆ. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸಿ.ಕೆ.ಬಾಬಾ ಅವರ ನೇತ್ರತ್ವದ ತಂಡ ಕಂಪನಿಗೆ ಭೇಟಿ ನೀಡಿ ಪರಿಶಿಲಿಸಿದ್ದರು. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಂಪನಿ ಮುಖ್ಯಸ್ಥರಿಗೆ ಸೂಚಿಸಿದ್ದರು.