Thursday, August 18, 2022

Latest Posts

ಬಳ್ಳಾರಿ: ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನ

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಸಮಿಪದ ಬಿಳಿಕಲ್ ಸಂರಕ್ಷಿತ ಅರಣ್ಯದ ಮಡಿಲಲ್ಲಿ‌ ಇರುವ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನಕ್ಕೆ ಬಿಳಿ‌ಹುಲಿ, ತೋಳ ಹೊಸ ಅತಿಥಿಯಾಗಿ ಆಗಮಿಸಿದ್ದಾರೆ.

ಮೈಸೂರು ಮೃಗಾಲಯದಿಂದ ಈ ಉದ್ಯಾನವನಕ್ಕೆ ತರಲಾಗಿದೆ. ಬಿಳಿ ಹುಲಿಯ ಹೆಸರು ಅರ್ಜುನ, ಕಪ್ಪಪಟ್ಟಿ‌ ಹೊಂದಿರುವ ಈ ಹುಲಿಗೆ ಬರೋಬ್ಬರಿ 5 ವರ್ಷ, ಮೈಸೂರಿನಿಂದ ಒಟ್ಟು ಏಳು ಹುಲಿಗಳು ಬಂದಿವೆ. ರಾಜ್ಯದಲ್ಲೇ ಮೈಸೂರು ಮೃಗಾಲಯ ‌ಬಿಟ್ಟರೆ ಬೇರೆ ಯಾವ ಮೃಗಾಲಯಗಳಲ್ಲಿ ಬಿಳಿ ಹುಲಿಗಳಿಲ್ಲ. ಇವುಗಳ ಜೊತೆಗೆ ತೋಳಗಳು ಬಂದಿರುವುದರಿಂದ ಈ ಉದ್ಯಾನವನ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!