Tuesday, June 28, 2022

Latest Posts

ಬಳ್ಳಾರಿ| ಅಬಕಾರಿ ಪೊಲೀಸರಿಂದ ದಿಢೀರ್ ದಾಳಿ: 3 ಲಕ್ಷ ರೂ.ಮೌಲ್ಯದ 32 ಕೆಜಿ ಗಾಂಜಾ ವಶ,

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಸುಶೀಲಾನಗರದ ಹೊರವಲಯದ ಹೊಲವೊಂದರಲ್ಲಿ ಬೆಳೆಯಲಾಗಿದ್ದ ಗಾಂಜಾವನ್ನು ಅಬಕಾರಿ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳ ತಂಡ‌ ನಡೆಸಿದ ದಿಢೀರ್ ದಾಳಿ ವೇಳೆ 3 ಲಕ್ಷ ರೂ.ಮೌಲ್ಯದ 32 ಕೆಜಿ (142 ಗಾಂಜಾ ಗೀಡಗಳು) ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಜಮೀನಿನ ಮಾಲೀಕ, ಆರೋಪಿ ನಾಪತ್ತೆಯಾಗಿದ್ದು, ಪತ್ತೆ ಕಾರ್ಯಾಚರಣೆ ಚುರುಕು ಗೊಳಿಸಿದ್ದಾರೆ.
ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ಸಯೀದಾ ಅಫ್ರೀನ್, ಡಿವೈಎಸ್ಪಿ ಬಸಪ್ಪ ಪೂಜಾರ್ ಅವರ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಗಳಾದ ಶಂಕರ್ ದೊಡ್ಡಮನಿ, ವಿಜಯಕುಮಾರ್ ಸೆಲವಡೆ, ಜ್ಯೋತಿಬಾಯಿ, ತುಕಾರಾಂ, ಅಂಜನೇಯ ಸೇರಿದಂತೆ ಅಬಕಾರಿ ಇಲಾಖೆಯ ಸಿಬ್ಬಂದಿಗಳಿದ್ದರು. ಮಂಗಳವಾರ ನಡೆದ ದಾಳಿ ವೇಳೆ 8ಅಡಿ ಎತ್ತರಕ್ಕೆ ಬೆಳೆದು ನಿಂತಿದ್ದ 142 ಗಾಂಜಾ ಗೀಡಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಡೂರು ಅಬಕಾರಿ ಠಾಣೆಯಲ್ಲಿ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss