Thursday, July 7, 2022

Latest Posts

ಬಳ್ಳಾರಿ| ಕಳಪೆ ಕಾಮಗಾರಿಗಳು ಕಂಡು ಬಂದರೆ ಗುತ್ತಿಗೆದಾರರ ವಿರುದ್ದ ಕ್ರಮ: ಶಾಸಕ ರೆಡ್ಡಿ ಎಚ್ಚರಿಕೆ

ಬಳ್ಳಾರಿ: ನಗರ ಸೇರಿದಂತೆ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿದ್ದು, ಯಾವುದೇ ಕಾಮಗಾರಿಗಳು ಕಳಪೆಯಾಗಿರುವುದು ಕಂಡು ಬಂದರೆ ಅಥವಾ ದೂರುಗಳು ಬಂದಲ್ಲಿ ಕೂಡಲೇ ಸಂಬಂಧಿಸಿದ ಇಲಾಖೆ‌ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಎಚ್ಚರಿಸಿದರು.
ನಗರದ ಗಾಂಧಿನಗರ ಬಡಾವಣೆಯ ಕೆಎಚ್ ಬಿ ಕಾಲೋನೊಯಲ್ಲಿ ಜಿಲ್ಲಾ ಖನಿಜ ನಿಧಿ ಅಡಿಯಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸುಮಾರು 43 ಲಕ್ಷ ರೂ.ವೆಚ್ಚದ ಸಿ.ಸಿ. ರಸ್ತೆ ಕಾಮಗಾರಿಗೆ ಮಂಗಳವಾರ ಚಾಲನೆ‌ ನೀಡಿ ಮಾತನಾಡಿದರು. ಕ್ಷೇತ್ರದ ಜನರು ನಮ್ಮ‌ ಮೇಲೆ ಇಟ್ಟಿರುವ‌ ನಂಬಿಕೆ, ವಿಶ್ವಾಸಕ್ಕೆ ಎಂದೂ ಧಕ್ಕೆಯಾಗಕೂಡದು. ಅವರು ನಮ್ಮ ಮೇಲೇ ಅಪಾರವಾದ ಪ್ರೀತಿ ವಿಶ್ವಾಸವಿಟ್ಟು ಚುನಾವಣೆಯಲ್ಲಿ ಆರ್ಶಿವಾದ್ದು, ಅವರ ನಿರೀಕ್ಷೆಯಂತೆ ಅವಧಿಯಲ್ಲಿ ಕೆಲಸ ನಿರ್ವಹಿಸುವೆ. ಬಳ್ಳಾರಿ ನಗರವನ್ನು ನಾನಾ ರೀತಿಯಲ್ಲಿ ಅಭಿವೃದ್ಧಿ ಪಡಿಸಿ ರಾಜ್ಯದಲ್ಲೇ‌ ಮಾದರಿಯನ್ನಾಗಿ ಮಾಡುವೆ ಎಂದು ಭರವಸೆ ನೀಡಿದರು.
ಇಲ್ಲಿವರೆಗೆ ನಗರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಇನ್ನೂ ಅನೇಕ ಕೆಲಸಗಳು ಚಾಲನೆಯಲ್ಲಿವೆ. ಇನ್ನೂ ಕನಸಿನ ಕೆಲ ಯೋಜನೆಗಳನ್ನು ಅನುಷ್ಟಾನಕ್ಕೆ ತಂದು ನಗರವನ್ನು ರಾಜ್ಯದಲ್ಲೇ ಮಾದರಿಯನ್ನಾಗಿ‌ ಮಾಡುವೆ, ಜನರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.
ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಮಾತನಾಡಿ, ನಮ್ಮ ಬಳ್ಳಾರಿ ನಗರ ರಾಜ್ಯದಲ್ಲೇ ಮಾದರಿಯಾಗಬೇಕು ಎಂದು ಸಂಕಲ್ಪ‌ ಮಾಡಿರುವೆ, ಇದಕ್ಕೆ ಜನರ ಸಹಕಾರ ಅತ್ಯಗತ್ಯ. ಬೂಡಾ ಅಧ್ಯಕ್ಷರಾದ ಬಳಿಕ ನಗರದಲ್ಲಿ ಅನೇಕ‌ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ನಗರದ ಸೌಂದರ್ಯ ಹೆಚ್ಚಿಸಲು ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು. ನಮ್ಮ ಸರ್ಕಾರವೇ ರಾಜ್ಯ ಹಾಗೂ ಕೇಂದ್ರದಲ್ಲಿದ್ದು ಅನುದಾನದ ಕೊರತೆಯಾಗೋಲ್ಲ‌ ಎನ್ನುವ ವಿಶ್ವಾಸವಿದೆ. ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು. ಈ ಸಂದರ್ಭದಲ್ಲಿ ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರ್ ರೆಡ್ಡಿ, ಮುಖಂಡರಾದ ಶ್ರೀನಿವಾಸ್ ಮೋತ್ಕರ್, ಎಸ್.ಮಲ್ಲನಗೌಡ, ಸುಮಾ ರೆಡ್ಡಿ, ಹನುಮಂತ, ದುರ್ಗೇಶ್, ರಘು, ಕೃಷ್ಣ ರೆಡ್ಡಿ, ಕಾಯಿಪಲ್ಲೆ ಬಸವ, ರಾಮಾಂಜನಿ, ಹುಸೇನಪ್ಪ, ನಾಗರಾಜ, ಬುಡಾ ಇಂಜಿನಿಯರ್ ರವಿಶಂಕರ್ ಸೇರಿದಂತೆ ಸ್ಥಳೀಯ ಮುಖಂಡರು ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss