Saturday, August 13, 2022

Latest Posts

ಬಳ್ಳಾರಿ| ಕೊರೋನಾ ಸೋಂಕಿನಿಂದ 12 ಜನ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ

ಬಳ್ಳಾರಿ: ಕೊರೋನಾ ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಬಳ್ಳಾರಿ ಕೋವಿಡ್ ಆಸ್ಪತ್ರೆಯಿಂದ ಶನಿವಾರ ಸಂಜೆ 12 ಜನರನ್ನು ಬಿಡುಗಡೆ ಮಾಡಲಾಯಿತು.
ಇಂದಿನ 14ಪ್ರಕರಣಗಳು ಸೇರಿದಂತೆ 416ಪ್ರಕರಣಗಳು ಇದುವರೆಗೆ ದೃಢಪಟ್ಟಂತಾಗಿದೆ. ಇದುವರೆಗೆ 112 ಜನರು ಬಿಡುಗಡೆಯಾದಂತಾಗಿದ್ದು, 302 ಪ್ರಕರಣಗಳು ಸಕ್ರಿಯವಾಗಿವೆ. ಇದುವರೆಗೆ 2ಜನರು ಸಾವನ್ನಪ್ಪಿದ್ದಾರೆ.
ಇಂದು ಬಿಡುಗಡೆಯಾದವರ ವಿವರ: P-6443 60ವರ್ಷದ ಮಹಿಳೆ, ಫಸ್ಟ್ ಗೇಟ್ ಬಳ್ಳಾರಿ,P-6430 33 ವರ್ಷದ ಪುರುಷ ವಿದ್ಯಾನಗರ ತೋರಣಗಲ್ಲು,P-6440 27ವರ್ಷದ ಪುರುಷ ಸಂಡೂರು,P-6447 24ವರ್ಷದ ಪುರುಷ ಹೋಸಪೇಟೆ,P-6452 33ವರ್ಷದ ಪುರುಷ ಗುಗ್ಗರ ಹಟ್ಟಿ,P-6432 48ವರ್ಷದ ಪುರುಷ ತೋರಣಗಲ್ಲು,P-5576 34ವರ್ಷದ ಪುರುಷ ಎಸ್.ಎನ್ ಪೇಟೆ ಬಳ್ಳಾರಿ,P-6457 27ವರ್ಷದ ಪುರುಷ ಸಂಡೂರು,P-6458 32 ಪುರುಷ ಸಂಡೂರು,P-6476 35 ವರ್ಷದ ಪುರುಷ ಬಳ್ಳಾರಿ,P- 6478 3 ವರ್ಷದ ಹೆಣ್ಣು ಮಗು ಕೌಲ್ ಬಜಾರ್ ಬಳ್ಳಾರಿ,P-6501 24 ವರ್ಷದ ಯುವತಿ ತೋರಣಗಲ್ಲು.
ಬಳ್ಳಾರಿ 5, ತೋರಣಗಲ್ಲು 3, ಸಂಡೂರು 3, ಹೊಸಪೇಟೆ 1 ಸೇರಿದಂತೆ ಒಟ್ಟು 12 ಜನರು ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಗುಣಮುಖರಾಗಿ ಮನೆಯತ್ತ ತೆರಳಲು ಸಿದ್ದರಾಗಿ ನಿಂತಿದ್ದವರಿಗೆ ಹೂಗುಚ್ಛ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಕಂದಾಯ ಇಲಾಖೆ ವತಿಯಿಂದ ನೀಡಲಾಗುವ ಪಡಿತರ ಕಿಟ್ ಕಳುಹಿಸಿಕೊಡಲಾಯಿತು.
ಕೋವಿಡ್ ನೋಡಲ್ ಅಧಿಕಾರಿ ಡಾ.ದೈವಿಕ್, ಹಿರಿಯ ತಜ್ಞರಾದ ಡಾ.ಪ್ರಕಾಶ್ ಭಾಗವತಿ, ಡಾ.ಉದಯ್ ಶಂಕರ್,ಡಾ.ಮದು ಜುಮ್ಲ,ಶುಶ್ರೂಷಾ ಅಧೀಕ್ಷಕಿ ಶಾಂತಾಬಾಯಿ, ಡಾ.ಚಿತ್ರಶೇಖರ ಸೇರಿದಂತೆ ಲ್ಯಾಬ್ ಟೆಕ್ನಿಷಿಯನ್ಸ್, ಎಕ್ಸ್-ರೇ, ಡಿ-ಗ್ರೂಪ್
ಸಿಬ್ಬಂದಿ ಸೇರಿದಂತೆ ಆಸ್ಪತ್ರೆಯ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss